ಅಮೃತಸರ : ಮೂರು ವರ್ಷದ ಹಿಂದೆ ಅರಬ್ಬಿ ಸಮುದ್ರದಲ್ಲಿ ಅಕ್ರಮವಾಗಿ ಗಡಿರೇಖೆ ಪ್ರವೇಶಿಸಿದ್ದ ಆರೋಪದ ಮೇಲೆ ಪಾಕಿಸ್ತಾನ ಸರ್ಕಾರದಿಂದ ಬಂಧನಕ್ಕೆ ಒಳಗಾಗಿದ್ದ ಭಾರತದ 80 ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದೆ.
0
samarasasudhi
ನವೆಂಬರ್ 12, 2023
ಅಮೃತಸರ : ಮೂರು ವರ್ಷದ ಹಿಂದೆ ಅರಬ್ಬಿ ಸಮುದ್ರದಲ್ಲಿ ಅಕ್ರಮವಾಗಿ ಗಡಿರೇಖೆ ಪ್ರವೇಶಿಸಿದ್ದ ಆರೋಪದ ಮೇಲೆ ಪಾಕಿಸ್ತಾನ ಸರ್ಕಾರದಿಂದ ಬಂಧನಕ್ಕೆ ಒಳಗಾಗಿದ್ದ ಭಾರತದ 80 ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದೆ.
ಪಾಕ್‌ನ ಕರಾಚಿಯ ಮಾಲಿರ್ ಕಾರಾಗೃಹದಿಂದ ಬಿಡುಗಡೆಯಾದ ಈ ಮೀನುಗಾರರನ್ನು ಶುಕ್ರವಾರ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಸುಪರ್ದಿಗೆ ಒಪ್ಪಿಸಲಾಗಿದೆ.
ನಿಯಮ ಉಲ್ಲಂಘಿಸಿದ್ದರಿಂದ ದೋಣಿಗಳನ್ನು ವಶಕ್ಕೆ ಪಡೆದು ಈ ಮೀನುಗಾರರನ್ನು ಬಂಧಿಸಲಾಗಿತ್ತು.
'ಎಲ್ಲಾ ಮೀನುಗಾರರಿಗೂ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯಿಂದ ತುರ್ತು ಪ್ರವಾಸಿ ಪ್ರಮಾಣ ಪತ್ರ ವಿತರಿಸಲಾಗಿದೆ. ಶುಕ್ರವಾರ ರಾತ್ರಿ ಎಲ್ಲರೂ ವಾಘಾ ಗಡಿಯ ಮೂಲಕ ತವರು ನೆಲವನ್ನು ಪ್ರವೇಶಿಸಿದ್ದಾರೆ' ಎಂದು ಪಂಜಾಬ್ ಪೊಲೀಸ್ ವಿಭಾಗದ ಶಿಷ್ಟಾಚಾರ ಅಧಿಕಾರಿ ಅರುಣ್ ಮಹಲ್ ತಿಳಿಸಿದ್ದಾರೆ.