HEALTH TIPS

ಮತದಾರರ ಪಟ್ಟಿಯಲ್ಲಿ ಹೆಸರು ಪುನರಾವರ್ತನೆ ಅರ್ಜಿ ವಿಚಾರಣೆ- ಸುಪ್ರೀಂ ಕೋರ್ಟ್‌

             ವದೆಹಲಿ : ಮತದಾರರ ಪಟ್ಟಿಯಲ್ಲಿ ಪುನರಾವರ್ತನೆಯಾಗಿರುವ ಹೆಸರುಗಳನ್ನು ಕೈಬಿಡಲು ಕೋರಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

               ಈ ಅರ್ಜಿಯ ಪ್ರತಿಯನ್ನು ಚುನಾವಣಾ ಆಯೋಗದ (ಇಸಿಐ) ವಕೀಲರಿಗೂ ನೀಡುವಂತೆ ಅರ್ಜಿದಾರ 'ಸಂವಿಧಾನ ಬಚಾವೋ ಟ್ರಸ್ಟ್‌'ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.

ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠವು ನಿರ್ದೇಶನ ನೀಡಿದೆ.

               'ಈ ವಿಷಯದಲ್ಲಿ ನ್ಯಾಯಾಲಯವು ಮುಂದಿನ ಹೆಜ್ಜೆ ಇಡಲು ನಿರ್ಧರಿಸುವ ಮೊದಲು, ಅರ್ಜಿಯ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗದ ವಕೀಲ ಅಮಿತ್ ಶರ್ಮಾ ಅವರಿಗೆ ಸಲ್ಲಿಸಲು ಅರ್ಜಿದಾರರಿಗೆ ನಿರ್ದೇಶನ ನೀಡುವುದು ಸೂಕ್ತ' ಎಂದು ಪೀಠವು ನ.10ರಂದು ಹೊರಡಿಸಿದ ಆದೇಶದಲ್ಲಿ ಹೇಳಿದೆ.

               ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಯವರ ಹೇಳಿಕೆ ಉಲ್ಲೇಖಿಸಿ, ಮತದಾರರ ಪಟ್ಟಿಯಲ್ಲಿರುವ ಪುನರಾವರ್ತೆಯಾದ ಹೆಸರುಗಳ ಪರಿಶೀಲನೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದನ್ನು ಪೀಠದ ಗಮನಕ್ಕೆ ತಂದರು.

                'ಮತದಾರರ ಪಟ್ಟಿಯಲ್ಲಿ ಪುನರಾವರ್ತಿತ ಹೆಸರುಗಳ ನಮೂದು ಸಮಸ್ಯೆ ನಿವಾರಿಸಲು ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ವರ್ಷದ ಜುಲೈ ಮತ್ತು ಆಗಸ್ಟ್ ನಡುವೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಈ ಸಮಸ್ಯೆ ನಿವಾರಣೆಯಾಗಬೇಕಿತ್ತು. ಆದರೆ, ಈ ಕೆಲಸ ಆಗಿಲ್ಲ' ಎಂದು ಅರ್ಜಿದಾರರ ವಕೀಲರು, ವಿಚಾರಣೆಯ ಸಂದರ್ಭ ಒತ್ತಿ ಹೇಳಿದರು.

               ಆಗ ಪೀಠವು, ಚುನಾವಣಾ ಆಯೋಗದ ಮೊರೆ ಹೋಗುವಂತೆ ವಕೀಲರಿಗೆ ಸೂಚಿಸಿತು. ಆದರೆ, ಅರ್ಜಿದಾರರ ವಕೀಲರು, ಇಸಿಐ ಮುಂದೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೀಠದ ಗಮನಕ್ಕೆ ತಂದರು.

              ಪೀಠವು ಮುಂದಿನ ವಿಚಾರಣೆಯನ್ನು ಇದೇ ತಿಂಗಳ 28ಕ್ಕೆ ನಿಗದಿಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries