HEALTH TIPS

ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

                ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಲೀಲಾವತಿ ಬೈಪಡಿತ್ತಾಯ, ಚಾರ್ಮಾಡಿ ಹಸನಬ್ಬ, ಡಾ.ಪ್ರಶಾಂತ್ ಶೆಟ್ಟಿ, ದಿನೇಶ್ ಅಮೀನ್‌ ಮಟ್ಟು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಮಾರುತಿ ಜನಸೇವಾ ಸಂಘಕ್ಕೆ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

                                     ಪ್ರಶಸ್ತಿ ಪುರಸ್ಕೃತರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

'ಅಕ್ಷರ ಕ್ರಾಂತಿ'ಗೆ ಪ್ರಶಸ್ತಿಯ ಕಾಂತಿ

ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂಬ ಅಚಲ ನಂಬಿಕೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮುಡಿಗೇರಿದೆ.

ಎರಡು ದಶಕಗಳ ಹಿಂದೆ ರಾಜಕೀಯ ನೇತಾರ ದಿವಂಗತ ಬಿ.ಎ ಮೊಯಿದೀನ್ ಅವರ ದೂರದೃಷ್ಟಿಯಲ್ಲಿ ಸ್ಥಾಪನೆಗೊಂಡ ಒಕ್ಕೂಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 180ಕ್ಕೂ ಹೆಚ್ಚು ಮುಸ್ಲಿಂ ಆಡಳಿತ ಮಂಡಳಿಯ ಶಿಕ್ಷಣ ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಬಡ, ಮಧ್ಯಮ ವರ್ಗಗಳ 60ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೈಗೆಟುಕುವ ಶುಲ್ಕದಲ್ಲಿ ಈ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರಿಗೆ ತರಬೇತಿ, ಜಾಗೃತಿ ಕಾರ್ಯಕ್ರಮ, ಸಾಮರಸ್ಯದ ಅರಿವು, ಸ್ಪರ್ಧಾತ್ಮಕ ಪರೀಕ್ಷೆಗಳು, ನಾಗರಿಕ ಸೇವಾ ತರಬೇತಿ ಶಿಬಿರಗಳು, ವಿದ್ಯಾರ್ಥಿವೇತನ, ಉದ್ಯೋಗ ಮಾಹಿತಿ, ಪ್ರತಿಭಾ ಪುರಸ್ಕಾರ, ಸಾಹಿತ್ಯದ ಸೊಗಡು ಮೊದಲಾದವು ಸಂಸ್ಥೆ ನಡೆಸುವ ವಿಶೇಷ ಚಟುವಟಿಕೆಗಳು. 

                              'ಜನಸೇವೆ'ಗೆ ದೊರೆತ ಮನ್ನಣೆ

ಮಂಗಳೂರು: ಕ್ರಿಕೆಟ್‌ ಪಂದ್ಯದಲ್ಲಿ ದೊರಕಿದ ನಗದು ಬಹುಮಾನದಲ್ಲಿ ಜನೋಪಯೋಗಿ ಕಾಯಕ ಮಾಡಬೇಕೆಂಬ ಕನಸಿನೊಂದಿಗೆ 1985ರಲ್ಲಿ ಜನ್ಮ ತಳೆದ ಉಳ್ಳಾಲದ ಮಾರುತಿ ಜನಸೇವಾ ಸಂಘವು, ₹5,000 ಆರಂಭಿಕ ಮೊತ್ತದಲ್ಲಿ ಮಕ್ಕಳಿಗೆ ಸ್ಕಾಲರ್‌ಷಿಪ್‌, ಅಂಗವಿಕಲರಿಗೆ ಊರುಗೋಲು ನೀಡುವ ಮೂಲಕ ಚಟುವಟಿಕೆ ಪ್ರಾರಂಭಿಸಿ, ಈಗ ಸಾಮಾಜಿಕ ಕಾರ್ಯಕ್ಕೆ ತನ್ನನ್ನು ಅರ್ಪಿಸಿಕೊಂಡಿದೆ.

ಸಂಘದ ಬೆಳ್ಳಿಹಬ್ಬದ ನೆನಪಿಗಾಗಿ ಉಳ್ಳಾಲ ಮೊಗವೀರ ಸಂಘದ ಹಿರಿಯರು ಕಟ್ಟಿಸಿದ್ದ ಮೊಗವೀರ ಹಿರಿಯ ಪ್ರಾಥಮಿಕ‌ ಶಾಲೆಗೆ ಅಂದಾಜು ₹1.5ಕೋಟಿ ವೆಚ್ಚ ದಲ್ಲಿ ಎರಡು ಮಹಡಿಯ ಕಟ್ಟಡ ಮರು ನಿರ್ಮಿಸಿ ಕೊಟ್ಟಿದ ಕೀರ್ತಿ ಸದಸ್ಯರದು. ಕಡಲ್ಕೊರೆತದಿಂದ ಮನೆ ಕಳೆದುಕೊಂಡ ಐವರಿಗೆ ಮನೆ ನಿರ್ಮಿಸಿಕೊಟ್ಟಿದೆ.

'ಸರ್ವ ಧರ್ಮೀಯರನ್ನೂ ಸಮಾನವಾಗಿ ಕಾಣುವ ಸಂಘದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 40ರಷ್ಟು ಸದಸ್ಯರನ್ನು ಹೊಂದಿರುವ ಸಂಘವು ಯಾರಿಂದಲೂ ದೇಣಿಗೆ ಪಡೆಯದೆ, ಸದಸ್ಯರ ಕೊಡುಗೆಯಿಂದ ಪ್ರತಿವರ್ಷ ₹15 ಲಕ್ಷದಷ್ಟು ಮೊತ್ತವನ್ನು ಸಮಾಜಕ್ಕಾಗಿ ವಿನಿಯೋಗಿಸುತ್ತದೆ' ಎನ್ನುತ್ತಾರೆ ಸಂಘದ ಗೌರವಾಧ್ಯಕ್ಷ ಸುಧೀರ್ ಅಮೀನ್.

                                        ಕ್ರಿಯಾಶೀಲತೆಗೆ ದೊರೆತ ಗೌರವ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಅವರು ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕಾರ್ಕಳ ತಾಲ್ಲೂಕಿನ ಹೆಬ್ರಿ ಮಾಬ್ರಿಯ ಅವರು ಎಸ್‌ಡಿಎಂನಲ್ಲೇ ಬಿಎನ್‌ವೈಎಸ್ ಪದವಿ ಪಡೆದು, ಇದೇ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿ ಜೀವನ ಆರಂಭಿಸಿದವರು. ಪ್ರಸ್ತುತ ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಟಾಸ್ಕ್‌ಫೋರ್ಸ್ ಸದಸ್ಯರಾಗಿ ಹಾಗೂ ಆಯುಷ್ ಮಂತ್ರಾಲಯದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಹಾಗೂ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಂಡಳಿಯಲ್ಲಿ, ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿರುವುದು ಅವರ ಕ್ರಿಯಾಶೀಲತೆಗೆ ದೊರೆತ ಗೌರವವಾಗಿದೆ.

ಡಾ. ಬಿ.ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ವಸಿಷ್ಠ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳನ್ನು ಪಡೆದಿರುವ ಡಾ. ಪ್ರಶಾಂತ್ ಅವರ ನೇತೇತ್ವದಲ್ಲಿ ಕರ್ನಾಟಕದ 48 ಸ್ಥಳಗಳಲ್ಲಿ ನಡೆದ ಯೋಗ ತರಗತಿಗಳು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿವೆ.

                                          ಜೀವ ರಕ್ಷಕನಿಗೆ ರಾಜ್ಯೋತ್ಸವದ ಗರಿ

ಬೆಳ್ತಂಗಡಿ: ಅತ್ಯಂತ ಅಪಾಯಕಾರಿಯಾದ ಚಾರ್ಮಾಡಿ ಘಾಟಿಯಲ್ಲಿ ಅಪಘಾತಗಳು ಸಂಭವಿಸಿದಾಗ ಹಲವು ಜೀವಗಳನ್ನು ರಕ್ಷಿಸಿದ ಚಾರ್ಮಾಡಿ ಹಸನಬ್ಬ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ಸಮಾಜ ಸೇವೆಯನ್ನು ಆತ್ಮ ಸಂತೋಷಕ್ಕಾಗಿ ಮಾಡುತ್ತಿರುವ ಅಪರೂಪದ ವ್ಯಕ್ತಿ ಅವರು. ಉಜಿರೆ ಸಮೀಪ ಲಾಯಿಲದ ಊಟಕ್ಕೂ ಕಷ್ಟವಿದ್ದ ಕಾಲದಲ್ಲಿ 1ನೇ ತರಗತಿ ತನಕ ಓದಿ, ಬಾಳೆಹೊನ್ನೂರಿನಲ್ಲಿ ಹೋಟೆಲ್‌ ಕೆಲಸಕ್ಕೆ ಸೇರಿದರು. 18ನೇ ವಯಸ್ಸಿನಲ್ಲಿ ಚಾರ್ಮಾಡಿಗೆ ಮರಳಿ ಚಿಕ್ಕ ಹೋಟೆಲ್ ತೆರೆದರು. ಹೋಟೆಲ್‌ಗೆ ಬರುತ್ತಿದ್ದ ಲಾರಿ ಚಾಲಕರು ಕೊಟ್ಟ ವರ್ತಮಾನದಿಂದ ಆ ಮಾರ್ಗದಲ್ಲಾಗುವ ಅಪಘಾತಗಳ ಅರಿವಾಯಿತು. ತುರ್ತು ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಹವ್ಯಾಸ ರೂಢಿಸಿಕೊಂಡ, ಅವರು ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತ, ಮತ್ತಿತರ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕೆ ಧಾವಿಸುತ್ತಾರೆ.

ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಮಳೆಗಾಲದಲ್ಲಿ ಕಲ್ಲು ಬಂಡೆಗಳು ಕುಸಿದು ಬಿದ್ದರೆ, ರಸ್ತೆ ಬ್ಲಾಕ್ ಆದರೆ, ವಾಹನಗಳು ಪಲ್ಟಿಯಾದರೆ ಅಲ್ಲಿಗೆ ಧಾವಿಸುವ ಆಪತ್ಬಾಂಧವ 'ಚಾರ್ಮಾಡಿ ಹಸನಬ್ಬ'.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries