HEALTH TIPS

ಸ್ತ್ರೀಯರ ರಾಜಕೀಯ ಪ್ರವೇಶ ಸುಲಭವಲ್ಲ: ಬಿಜೆಪಿ ಅಭ್ಯರ್ಥಿ ಕೆ. ವನ್ಲಾಲ್‌ರೌತಿ

                ಗುವಾಹಟಿ: ಮಿಜೋರಾಂನಲ್ಲಿ ಪುರುಷ ಮತದಾರರಿಗಿಂತ 21 ಸಾವಿರದಷ್ಟು ಹೆಚ್ಚು ಮಹಿಳಾ ಮತದಾರರಿದ್ದಾರೆ. ಆದರೂ ರಾಜ್ಯ ವಿಧಾನಸಭೆಯಲ್ಲಿ ಒಬ್ಬ ಶಾಸಕಿಯೂ ಇಲ್ಲ. 1987ರಲ್ಲಿ ಮಿಜೋರಾಂ ರಾಜ್ಯ ರಚನೆಯಾದಾಗಿನಿಂದ ಇಲ್ಲಿಯವರೆಗೆ ಕೇವಲ ನಾಲ್ವರು ಮಹಿಳೆಯರು ವಿಧಾನಸಭೆಗೆ ಆಯ್ಕೆ ಆಗಿದ್ದಾರೆ.

               ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 174 ಅಭ್ಯರ್ಥಿಗಳಲ್ಲಿ ಮಹಿಳೆಯರ ಸಂಖ್ಯೆ ಕೇವಲ 18. ಅವರಲ್ಲಿ ಮೂವರು ಬಿಜೆಪಿಯಿಂದ, ತಲಾ ಇಬ್ಬರು ಆಡಳಿತಾರೂಢ ಎಂಎನ್‌ಎಫ್‌ ಮತ್ತು ವಿರೋಧ ಪಕ್ಷಗಳಾದ ಝೆಡ್‌ಪಿಎಂ ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಬಾಕಿ ಒಂಬತ್ತು ಮಹಿಳಾ ಅಭ್ಯರ್ಥಿಗಳು ಪಕ್ಷೇತರರು.

                  ಪುರುಷಪ್ರಧಾನ ಮಿಜೋ ಸಮಾಜದಲ್ಲಿ ಮಹಿಳೆಯರು ರಾಜಕೀಯದಲ್ಲಿ ಉನ್ನತಿ ಸಾಧಿಸಲು ಮಹಿಳಾ ಮೀಸಲಾತಿ ಒಂದೇ ಸದ್ಯದ ಭರವಸೆ ಎಂದು ಸೆರ್ಛಿಪ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ವನ್ಲಾಲ್‌ರೌತಿ ಅವರು 'ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

                                    ರಾಜ್ಯದಲ್ಲಿ ಶಾಸಕಿಯರೇ ಇಲ್ಲ. ಇದಕ್ಕೆ ಕಾರಣ?

                ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿರುವ ಚರ್ಚ್‌ಗಳು, ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಮಹಿಳೆಯರಿಗೆ ಉನ್ನತ ಸ್ಥಾನಗಳು ಸಿಗುವುದಿಲ್ಲ. ಹಾಗಾಗಿ ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಚರ್ಚ್‌ಗಳು ಮತ್ತು ಎನ್‌ಜಿಒಗಳು ಕೂಡಾ ಮಹಿಳೆಯರ ಪ್ರಾತಿನಿಧ್ಯವನ್ನು ಇಷ್ಟಪಡುವುದಿಲ್ಲ.

                                        ನಿಮಗೆ ಟಿಕೆಟ್‌ ಸುಲಭದಲ್ಲಿ ದೊರಕಿತೇ?

            ಬೇರೆ ಪಕ್ಷಗಳಲ್ಲಾಗಿದ್ದರೆ ಕಷ್ಟವಾಗುತ್ತಿತ್ತು. ಆದರೆ, ಬಿಜೆಪಿಯು ಮಹಿಳಾ ರಾಜಕಾರಣಿಗಳ ಕುರಿತು ಒಲವು ಹೊಂದಿದೆ. ಹಾಗಾಗಿ ಕಷ್ಟ ಆಗಲಿಲ್ಲ. ಸಮರ್ಥರಿಗೆ ಬಿಜೆಪಿ ಟಿಕೆಟ್‌ ನೀಡುತ್ತದೆ.

ಬಿಜೆಪಿಯು ಹಿಂದೂ ಪರ ಪಕ್ಷ ಎಂದು ಬಿಂಬಿತವಾಗಿದೆ. ಕ್ರೈಸ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ            ಮಿಜೋರಾಂ ಜನರನ್ನು ಹೇಗೆ ಮನವೊಲಿಸುತ್ತದೆ?

                  ಬಿಜೆಪಿಯು ಹಿಂದೂಗಳ ಪಕ್ಷ ಎಂದು ಕಾಂಗ್ರೆಸ್‌ ಬಿಂಬಿಸಿದೆ. ಆಡಳಿತಾರೂಢ ಎಂಎನ್‌ಎಫ್‌ ಮತ್ತು ವಿರೋಧ ಪಕ್ಷ ಝೆಡ್‌ಪಿಎಂ ಎನ್‌ಡಿಎಯ ಸಹಭಾಗಿಗಳು. ದೆಹಲಿ ಮಟ್ಟದಲ್ಲಿ ಬಿಜೆಪಿ ನಾಯಕರ ಜೊತೆ ಸ್ನೇಹ ಸಾಧಿಸುವುದಾಗಿ ಝೆಡ್‌ಪಿಎಂ ಮುಖ್ಯಸ್ಥ ಲಾಲ್ದುಹೋಮಾ ಅವರು ಈ ಹಿಂದೆ ಹೇಳಿದ್ದರು. ಹೀಗಾಗಿ ಕಾಂಗ್ರೆಸ್‌ ಮಾತಿಗೆ ಕಿವಿಗೊಡಬೇಕಿಲ್ಲ.

                   ಹಾಗಿದ್ದೂ ಝೆಡ್‌ಪಿಎಂನ ಲಾಲ್ದುಹೋಮಾ ವಿರುದ್ಧ ನಿಮ್ಮನ್ನು ಕಣಕ್ಕಿಳಿಸಿರುವುದು ಏಕೆ?

                     ಶಾಸಕರಾಗಿ ಅವರು ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ, ಅವನ್ನು ಈಡೇರಿಸಿಲ್ಲ. ಕ್ಷೇತ್ರದ ಜನರಿಗೆ ಈ ವಿಷಯ ತಿಳಿದಿದೆ. ಪ್ರತಿ ಗ್ರಾಮ ಗಳಲ್ಲೂ ಮಹಿಳೆಯರಿಗೆ ರಾಜಕೀಯ ಕುರಿತು ಅರಿವು ಮೂಡಿಸಬೇಕಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries