HEALTH TIPS

ಇಂದು ಶ್ರೀ ಎಡನೀರುಮಠದಲ್ಲಿ ದೇರಾಜೆ ಸಂಸ್ಮರಣ ಗ್ರಂಥ, ಅಭಿನಂದನಾ ಗ್ರಂಥ ಲೋಕಾರ್ಪಣೆ ದೇರಾಜೆ ಸಂಸ್ಮರಣೆ

                ಕಾಸರಗೋಡು: ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯವರು ಸಂಪಾದಿಸಿದ ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು ( ಸಂಸ್ಮರಣ ಗ್ರಂಥ) ಮತ್ತು ರಸಋಷಿ (ಅಭಿನಂದನಾ ಗ್ರಂಥದ ದ್ವಿತೀಯ ಮುದ್ರಣ)  ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ನ. 14ರಂದು ಮಧ್ಯಾಹ್ನ 2ಗಂಟೆಗೆ ಶ್ರೀ ಎಡನೀರುಮಠದಲ್ಲಿ ಜರುಗಲಿರುವುದು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಕಾರ್ಯಕ್ರಮ ಜರುಗಲಿದೆ.

           ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಪುಸ್ತಕಗಳನ್ನು ಲೋಕಾರ್ಪಣೆಗೈಯುವರು. ಡಾ.ಟಿ.ಶ್ಯಾಮ್ ಭಟ್ ಐಎಎಸ್ ಅಧ್ಯಕ್ಷತೆ ವಹಿಸುವರು. ಪ್ರಸಿದ್ಧ ಅರ್ಥಧಾರಿ ಉಡುವೇಕೋಡಿ ಸುಬ್ಬಪ್ಪಯ್ಯ ಅವರು ದೇರಾಜೆ ಸಂಸ್ಮರಣೆ ಮಾಡಲಿದ್ದಾರೆ. ಪ್ರಖ್ಯಾತ ಸಾಹಿತಿಗಳು, ಪ್ರಸಿದ್ಧ ಯಕ್ಷಗಾನ ಕಲಾವಿದರೂ, ದೇರಾಜೆಯವರ ಗೆಳೆಯರು, ಬಂಧುಗಳು, ಮನೆಯವರು ಸೇರಿದಂತೆ ಇನ್ನೂರಕ್ಕೂ ಮಿಕ್ಕಿದ ಅಭಿಮಾನಿಗಳು ದೇರಾಜೆ ಅವರ ಒಡನಾಟದ ಬಗ್ಗೆ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. 

               ಕಾರ್ಯಕ್ರಮದ ಅಂಗವಾಗಿ  ವಿದ್ವಾನ್ ಗಣಪತಿ ಭಟ್ ಮತ್ತು ಎ.ಪಿ.ಪಾಠಕ್ ಅವರ ಹಿಮ್ಮೇಳದೊಂದಿಗೆ ದಿವಾಕರ ಹೆಗಡೆಯವರಿಂದ  ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ಜರಗಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries