ಕುಂಬಳೆ: ರಾಜ್ಯ ಶಾಲಾ ಕಲೋತ್ಸವ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎಲ್.ಪಿ.ಶಾಲೆಯೊಂದು ಉಪಜಿಲ್ಲಾ ಕಲೋತ್ಸವಕ್ಕೆ ವೇದಿಕೆ ಕಲ್ಪಿಸಿದೆ. ಸೋಮವಾರದಿಂದ ಜಿಜೆಬಿಎಸ್ ಪೆರಾಲ್ ನಲ್ಲಿ ಕುಂಬಳೆ ಉಪಜಿಲ್ಲಾ ಶಾಲಾ Pಲೋತ್ಸವ ಆರಂಭಗೊಂಡಿದೆ ಎಂದು ಕಲೋತ್ಸವ ಸಮಿತಿ ಪದಾಧಿಕಾರಿಗಳು ಸೋಮವಾರ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಲೆಯಲ್ಲಿ ಆರು ದಿನಗಳ ಕಾಲ ನಡೆಯುವ ಉಪಜಿಲ್ಲಾ ಕಲೋತ್ಸವ ಆಯೋಜಿಸಿದೆ. ಸೋಮವಾರದಿಂದ ವೇದಿಕೆಯೇತರ ಸ್ಪರ್ಧೆಗಳು ಆರಂಭಗೊಂಡಿದೆ. ಉಪಜಿಲ್ಲೆಯ 85 ರಷ್ಟು ಶಾಲೆಗಳ 4620 ಕಲಾ ಪ್ರತಿಭೆಗಳು ಭಾಗವಹಿಸುವರು. .
ಉಪಜಿಲ್ಲೆಯಲ್ಲಿ ಹಾಲಿವರ್ಷ ಭಾರೀ ಆರ್ಥಿಕ ವೆಚ್ಚ ತಗಲುವ ಹೊರೆಯಿಂದ ಪ್ರೌಢಶಾಲೆಗಳ ಸಹಿತ ಇತರ ಯಾವುದೇ ಶಾಲೆಗಳು ಕಲೋತ್ಸವ ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿದ್ದು, ಈ ದೌತ್ಯವನ್ನು ಪೇರಾಲು ಶಾಲೆ ಕೈಗೆತ್ತಿಕೊಂಡಿದೆ. ನ.18ರವರೆಗೆ ಹತ್ತು ವೇದಿಕೆಗಳಲ್ಲಿ ಕಲೋತ್ಸವ ನಡೆಯಲಿದೆ. 16ರಂದು ಮಧ್ಯಾಹ್ನ ಶಾಸಕ ಎ.ಕೆ.ಎಂ.ಅಶ್ರಫ್ ಅಧಿಕೃತವಾಗಿ ಉದ್ಘಾಟಿಸುವರು.18ರಂದು ಸಮಾರೋಪ ಸಭೆಯನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಕಲೋತ್ಸವÀಕ್ಕೆ ಅನುಕೂಲವಾಗುವಂತೆ ಕುಂಬಳೆಯಿಂದ ಪೇರಾಲ್ ಗೆ ಹದಿನೈದು ನಿಮಿಷಕ್ಕೊಂದರಂತೆ ಖಾಸಗಿ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಸಂಬಂಧಪಟ್ಟ ಅಧಿಕೃತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 8.15ಕ್ಕೆ ಆರಂಭವಾಗುವ ಈ ಸೇವೆ ಸಂಜೆ 7.45ರವರೆಗೆ ನಡೆಯಲಿದೆ. ಶಾಲಾ ಕಲೋತ್ಸವವನ್ನು ಸಾರ್ವಜನಿಕ ಹಬ್ಬವನ್ನಾಗಿ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ. ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಸಂಘಟನಾ ಸಮಿತಿ ತಿಳಿಸಿದೆ. ಕಲೋತ್ಸವದಲ್ಲಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ವಾರ್ಡ್ ಸದಸ್ಯೆ ತಾಹಿರಾ ಜಿ. ಶಂಸೀರ್, ಉಪಜಿಲ್ಲಾ ಶಿಕ್ಷಣಾಧಿಕಾರಿ ಎಂ.ಶಶಿಧರ, ಸಂಘಟನಾ ಸಮಿತಿ ಅಧ್ಯಕ್ಷ ಎಂ.ಪಿ.ಶ್ರೀಶಕುಮಾರ್, ಮುಖ್ಯಶಿಕ್ಷಕ ಹರ್ಷ ಎಂ.ಪಿ., ಪಿಟಿಎ ಅಧ್ಯಕ್ಷ ಮಹಮ್ಮದ್ ಪೇರಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


