HEALTH TIPS

ಮೂರು ಹಮಾಸ್ ಕಮಾಂಡರ್‌ಗಳನ್ನು ಹೊಡೆದುರುಳಿಸಿದ ಇಸ್ರೇಲ್ ಸೇನೆ

                     ಗಾಜಾಪಟ್ಟಿ :ಗಾಜಾಪಟ್ಟಿಯಲ್ಲಿ ಕಳೆದ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಹಮಾಸ್ ಕಮಾಂಡರ್‌ಗಳು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಇಂದು ಘೋಷಿಸಿದೆ.

                 ಯುದ್ಧಸಾಮಗ್ರಿಗಳನ್ನು ಅಡಗಿಸಿರುವ ಗೋದಾಮಿನೊಳಗೆ ಸೇನೆ ಪ್ರವೇಶಿಸಿದಾಗ ಭಯೋತ್ಪಾದಕರು ಅಡಗಿರುವುದು ತಿಳಿದುಬಂತು. ಈ ವೇಳೆ ಸೈನಿಕರು ವೈಮಾನಿಕ ದಾಳಿಗೆ ಕರೆ ನೀಡಿದರು. ಅಂತೆ ವೈಮಾನಿಕ ದಾಳಿಯಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಿ ಕಟ್ಟಡ ಮತ್ತು ಅದರ ಶಸ್ತ್ರಾಸ್ತ್ರಗಳನ್ನು ನಾಶಪಡಿಸಲಾಗಿದೆ ಎಂದು ಐಡಿಎಫ್ ತಿಳಿಸಿದ್ದಾರೆ.

                ಕನಿಷ್ಠ ಮೂವರು ಒತ್ತೆಯಾಳುಗಳನ್ನು ಶಿಫಾ ಆಸ್ಪತ್ರೆಗೆ ಕರೆತರುವ ಸಿಸಿಟಿವಿ ದೃಶ್ಯಾವಳಿಗಳನ್ನು ಐಡಿಎಫ್ ಪ್ರಸ್ತುತಪಡಿಸಿದ್ದು ಆಸ್ಪತ್ರೆಯ ಅಡಿಯಲ್ಲಿ ಹಮಾಸ್ ಭಯೋತ್ಪಾದಕ ಮೂಲಸೌಕರ್ಯವನ್ನು ನಿರ್ಮಿಸಿಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಗುಪ್ತಚರ ದೃಢಪಡಿಸಿದೆ ಎಂದು IDF ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.

                 ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್ ಉಗ್ರರು ಈ ವೇಳೆ ನೋವಾ ಮಾರ್ಸಿಯಾನೊ ಅವರನ್ನು ಶಿಫಾ ಆಸ್ಪತ್ರೆಗೆ ಕರೆತಂದಿದ್ದರು. ಮಧ್ಯ ಇಸ್ರೇಲ್‌ನ ಮೊದಿಇನ್‌ನ ನಿವಾಸಿ ಮಾರ್ಸಿಯಾನೊ ಅವರನ್ನು ಕಿಬ್ಬುಟ್ಜ್ ನಹಾಲ್ ಓಜ್‌ನಿಂದ  ಅಪಹರಿಸಲಾಯಿಗಿತ್ತು. ಆಕೆ ಲುಕ್‌ಔಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು.

                    ಕಳೆದ ಶುಕ್ರವಾರ IDF ಆಕೆಯ ದೇಹವನ್ನು ಶಿಫಾ ಪಕ್ಕದ ಕಟ್ಟಡದಿಂದ ವಶಪಡಿಸಿಕೊಂಡಿದೆ ಎಂದು ಹೇಳಿದರು. ಇನ್ನು ಗುರುವಾರ ಸೈನಿಕರು ಹತ್ತಿರದ ಕಟ್ಟಡದಿಂದ 65 ವರ್ಷದ ಯೆಹೂದಿತ್ ವೈಸ್ ಅವರ ದೇಹವನ್ನು ಪತ್ತೆಹಚ್ಚಿದ್ದು ವಶಪಡಿಸಿಕೊಳ್ಳಲಾಗಿದೆ ಎಂದು ಮಿಲಿಟರಿ ಘೋಷಿಸಿತು. ಮಾರ್ಸಿಯಾನೊ ಜೊತೆಗೆ, ನೇಪಾಳ ಮತ್ತು ಥೈಲ್ಯಾಂಡ್‌ನ ಇಬ್ಬರು ಒತ್ತೆಯಾಳುಗಳನ್ನು ಅಕ್ಟೋಬರ್ 7 ರ ಹತ್ಯಾಕಾಂಡದ ನಂತರ ಶಿಫಾ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು ಎಂದು ಹಗರಿ ಹೇಳಿದರು.

                 ಹಮಾಸ್ ಒತ್ತೆಯಾಳುಗಳನ್ನು ಕರೆತಂದು ಶಿಫಾ ಆಸ್ಪತ್ರೆಯ ಅಡಿಯಲ್ಲಿ ನಿರ್ಮಿಸಿಕೊಂಡಿರುವ ಸುರಂಗಗಳಲ್ಲಿ ಅಡಗಿಸಿಟ್ಟಿತ್ತು. ಇದೀಗ ಅವರನ್ನು ಹತ್ಯೆ ಮಾಡಿದೆ ಎಂದು ಐಡಿಎಫ್ ಹೇಳಿದೆ.

                      ಹಮಾಸ್ ಭಯೋತ್ಪಾದಕರು ಇಸ್ರೇಲಿ ಅಲ್ಲದ ಇಬ್ಬರು ಒತ್ತೆಯಾಳುಗಳನ್ನು ಮಿಲಿಟರಿ ಜೀಪ್ ಮೂಲಕ ಆಸ್ಪತ್ರೆಗೆ ಕರೆತರುವ ದೃಶ್ಯಗಳನ್ನು ಬಹಿರಂಗಪಡಿಸಿದ್ದಾರೆ. ನಾವು ಈ ಒತ್ತೆಯಾಳುಗಳನ್ನು ಇನ್ನೂ ಪತ್ತೆ ಮಾಡಿಲ್ಲ. ಅವರನ್ನು ಇನ್ನು ರಕ್ಷಿಸಿಲ್ಲ ಎಂದು ಅವರು ಹೇಳಿದರು.

                     ಹಮಾಸ್ ವೃದ್ಧರು, ಪುರುಷರು, ಮಹಿಳೆಯರು, ಮಕ್ಕಳು ಮತ್ತು ಶಿಶುಗಳನ್ನು ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಂಡಿದೆ. ಇಸ್ರೇಲ್ ರಕ್ಷಣಾ ಪಡೆಗಳು ಪ್ರತಿಯೊಬ್ಬ ಒತ್ತೆಯಾಳುಗಳನ್ನು ಮನೆಗೆ ಕರೆತರುವ ನೈತಿಕ ಹೊಣೆಗಾರಿಕೆಯನ್ನು ಹೊಂದಿದೆ. ಅದನ್ನು ಮಾಡುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹಗರಿ ಹೇಳಿದರು.

                      ಅಕ್ಟೋಬರ್ 7ರಂದು ಗಾಜಾ ಗಡಿ ಬಳಿ ಇಸ್ರೇಲಿ ಸಮುದಾಯಗಳ ಮೇಲೆ ಹಮಾಸ್ ದಾಳಿ ಮಾಡಿದ್ದು ಕನಿಷ್ಠ 1,200 ಜನರು ಸಾವನ್ನಪ್ಪಿದರು. ಇನ್ನೂ 240 ಪುರುಷರು, ಮಹಿಳೆಯರು, ಮಕ್ಕಳು ಮತ್ತು ಸೈನಿಕರನ್ನು ಒತ್ತೆಯಾಳುಗಳಾಗಿ ಗಾಜಾಕ್ಕೆ ಕರೆದೊಯ್ಯಲಾಗಿತ್ತು. 


    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries