ಕಾಸರಗೋಡು: ತ್ರಿಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ 'ನವಕೇರಳ ಸದಸ್'ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಹ್ವಾನಿಸುವ ಆಮಂತ್ರಣ ಪತ್ರಿಕೆಯೊಂದಿಗೆ ಕುಟುಂಬಶ್ರೀ ಕಾರ್ಯಕರ್ತರು ವಿಧಾನಸಭಾ ವ್ಯಾಪ್ತಿಯ ಮನೆಗಳಿಗೆ ತಲುಪಿದರು.
ಕ್ಷೇತ್ರದ ಎಂಟು ಪಂಚಾಯಿತಿಗಳು ಮತ್ತು ನೀಲೇಶ್ವರಂ ನಗರಸಭೆಗೆ ಪತ್ರಗಳನ್ನು ಕುಟುಂಬಶ್ರೀ ಸದಸ್ಯರು ಮನೆಗಳಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಿಡಿಎಸ್ ಅಧ್ಯಕ್ಷರ ನೇತೃತ್ವದಲ್ಲಿ ಎ.ಡಿ.ಎಸ್ ಸದಸ್ಯರಿಗೆ ಆಹ್ವಾನ ಪತ್ರಿಕೆ ಕಳುಹಿಸಿಕೊಡಲಾಗಿದ್ದು, ನಂತರ ಎಡಿಎಸ್ ಸದಸ್ಯರು ತಮ್ಮ ವ್ಯಪ್ತಿಯ ಕುಟುಂಬಶ್ರೀ ಘಟಕದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮೂಲಕ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯ ನಡೆಸುತ್ತಿದ್ದಾರೆ. ವಾರ್ಡ್ ಮಟ್ಟಗಳಲ್ಲಿ ಉದ್ಘಾಟನಾ ಸಮಾರಂಭದ ನಂತರ ಕುಟುಂಬಶ್ರೀ ಸದಸ್ಯರು ಸರದಿಯಂತೆ ಮನೆಗಳಿಗೆ ತೆರಳಿ ಆಮಂತ್ರಣ ಪತ್ರಿಕೆ ನೀಡಲಿದ್ದಾರೆ. ಕ್ಷೇತ್ರದಲ್ಲಿ ವಿವಿಧೆಡೆ ಕುಟುಂಬಶ್ರೀ ನೇತೃತ್ವದಲ್ಲಿ ಶಾಲೆಗಳಲ್ಲೂ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲಾಯಿತು. ನವೆಂಬರ್ 19 ರಂದು ಸಂಜೆ 5 ಗಂಟೆಗೆ Pಲಿಕಡವ್ ಮೈದಾನದಲ್ಲಿ ನವಕೇರಳ ಸದಸ್ ಅದ್ದೂರಿಯಾಗಿ ನೆರವೇರಲಿದೆ.




.jpg)
