ವಾರಾಣಸಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯ ಬೀಗದಕೈಗಳನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಕೋರಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಜ್ಞಾನವಾಪಿ ಆಡಳಿತ ಸಮಿತಿಗೆ ಜಿಲ್ಲಾ ನ್ಯಾಯಾಲಯವು ಗುರುವಾರ ಹೇಳಿದೆ.
0
samarasasudhi
ನವೆಂಬರ್ 03, 2023
ವಾರಾಣಸಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯ ಬೀಗದಕೈಗಳನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಕೋರಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಜ್ಞಾನವಾಪಿ ಆಡಳಿತ ಸಮಿತಿಗೆ ಜಿಲ್ಲಾ ನ್ಯಾಯಾಲಯವು ಗುರುವಾರ ಹೇಳಿದೆ.
'ನವೆಂಬರ್ 6ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
'ಮಸೀದಿಯ ನೆಲಮಾಳಿಗೆಗೆ ಆಡಳಿತ ಸಮಿತಿಯು ಬೀಗ ಹಾಕಿದೆ. ಜೊತೆಗೆ ಇದರ ಮಾರ್ಗಕ್ಕೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. 1993ಕ್ಕೂ ಮೊದಲು ಈ ನೆಲಮಾಳಿಗೆಯನ್ನು 'ವ್ಯಾಸ್‌ಜಿ ಕಾ ತಹಖಾನಾ' ಎಂದು ಕರೆಯಲಾಗುತ್ತಿತ್ತು. ಸೋಮನಾಥ ವ್ಯಾಸ್ ಎಂಬುವವರು ಇಲ್ಲಿ ಪೂಜೆ ಮಾಡುತ್ತಿದ್ದರು' ಎಂದು ಮದನ್ ಮೋಹನ್ ಯಾದವ್ ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
ನೆಲಮಾಳಿಗೆಯಲ್ಲಿರುವ ವಸ್ತುಗಳಿಗೆ ಹಾನಿ ಉಂಟುಮಾಡಬಹುದು ಎಂಬ ಕಾರಣಕ್ಕಾಗಿಯೇ ಅದರ ಬೀಗದಕೈಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.