ನವದೆಹಲಿ: ಸಾಮಾನ್ಯವಾಗಿ ಎಲ್ಲ ಮಕ್ಕಳು ಬಾಲ್ಯದಲ್ಲಿ ತುಂಬ ತುಂಟರಾಗಿಯೇ ಇರುತ್ತಾರೆ. ನಾನಾ ಥರದ ತರ್ಲೆತನ ತೋರಿರುತ್ತಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಅದಕ್ಕೆ ಹೊರತಾಗಿಲ್ಲ. ಅವರೂ ಬಾಲ್ಯದಲ್ಲಿ ಭಾರಿ ತರ್ಲೆ ಆಗಿದ್ರಂತೆ. ಮಕ್ಕಳ ದಿನವಾದ ಇಂದು ಅವರು ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ.
0
samarasasudhi
ನವೆಂಬರ್ 15, 2023
ನವದೆಹಲಿ: ಸಾಮಾನ್ಯವಾಗಿ ಎಲ್ಲ ಮಕ್ಕಳು ಬಾಲ್ಯದಲ್ಲಿ ತುಂಬ ತುಂಟರಾಗಿಯೇ ಇರುತ್ತಾರೆ. ನಾನಾ ಥರದ ತರ್ಲೆತನ ತೋರಿರುತ್ತಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಅದಕ್ಕೆ ಹೊರತಾಗಿಲ್ಲ. ಅವರೂ ಬಾಲ್ಯದಲ್ಲಿ ಭಾರಿ ತರ್ಲೆ ಆಗಿದ್ರಂತೆ. ಮಕ್ಕಳ ದಿನವಾದ ಇಂದು ಅವರು ಈ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಸ್ವಲ್ಪ ಕಿಡಿಗೇಡಿತನ ಇರದಿದ್ದರೆ ಬಾಲ್ಯವು ಅಪೂರ್ಣ. ನಾನು ಚಿಕ್ಕವನಾಗಿದ್ದಾಗ ನನ್ನ ಫ್ರೆಂಡ್ಸ್ ಜತೆ ಸಾಹಿತ್ಯ ಸಹವಾಸ್ನ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಅಲ್ಲಿದ್ದ ಕಾರುಗಳ ಚಕ್ರಗಳ ಗಾಳಿ ತೆಗೆಯುತ್ತಿದ್ದೆವು. ನಾವು ಅದರಲ್ಲಿ ಎಷ್ಟು ಎಕ್ಸ್ಪರ್ಟ್ ಆಗಿದ್ದೆವೆಂದರೆ ನಾಲ್ಕೂ ಚಕ್ರಗಳನ್ನು ಚಪ್ಪಟೆ ಮಾಡದೆ ನಮ್ಮ ಕೀಟಲೆ ಪೂರ್ಣವಾಗಿರುತ್ತಿರಲಿಲ್ಲ ಎಂದು ತಮ್ಮ ಬಾಲ್ಯದ ತುಂಟತನವನ್ನು ಹೇಳಿಕೊಂಡಿದ್ದಾರೆ.
ನೀವೂ ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಆಗ ಮಾಡುತ್ತಿದ್ದ ತರ್ಲೆತನಗಳ ಬಗ್ಗೆ ನನ್ನ ಪೋಸ್ಟ್ಗೆ ರಿಪ್ಲೈ ಮಾಡುವ ಮೂಲಕ ಹೇಳಿಕೊಳ್ಳಿ ಎಂದಿರುವ ಸಚಿನ್, ಅಷ್ಟರೊಳಗೆ ನಾನು ಹೊರಗೆ ಹೋಗಿ ನನ್ನ ಕಾರಿನ ಟಯರ್ಗಳನ್ನು ಚೆಕ್ ಮಾಡಿ ಬರುತ್ತೇನೆ ಎಂಬುದಾಗಿ ಹೇಳಿ ನಗೆಯುಕ್ಕಿಸಿದ್ದಾರೆ.
ಹೀಗೆ ಸಚಿನ್ ತನ್ನ ಬಾಲ್ಯದ ದಿನಗಳ ಬಗ್ಗೆ ಹೇಳಿಕೊಳ್ಳುತ್ತ ಮಕ್ಕಳ ದಿನಾಚರಣೆಗೆ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ. ಅವರ ಈ ಪೋಸ್ಟ್ಗೆ ಭರ್ಜರಿ ಪ್ರತಿಕ್ರಿಯೆಗಳು ಬಂದಿವೆ. ಈ ಪೋಸ್ಟ್ 15 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಇನ್ನು ಸಚಿನ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಎಂಆರ್ಎಫ್ನವರು ಯಾಕೆ ನಿಮ್ಮನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ತೆಗೆದುಕೊಂಡರು ಎಂಬುದು ಈಗ ಗೊತ್ತಾಯ್ತು ಎಂದಿದ್ದಾರೆ.