ಕಾಸರಗೋಡು : ಅಸಾಪ್ ಕಮ್ಯುನಿಟಿ ಸ್ಕಿಲ್ ಪಾರ್ಕ್, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಎಂ.ಎಸ್.ಡಬ್ಲ್ಯೂ ವಿಭಾಗದ ಜೊತೆ ಸಹಕರಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಕಣ್ಣೂರು ಆನ್‍ಕ್ಯೂರ್ ಬಯೋ ಸಲ್ಯೂಷನ್ಸ್‍ನಲ್ಲಿ ಅರ್ಲಿ ಕ್ಯಾನ್ಸರ್ ಡಿಟಕ್ಷನ್ ಆಂಡ್ ಪ್ರಿವನ್ಷನ್ ಸ್ಪೆಷಲಿಸ್ಟ್ ಡಾ.ಟಿ.ಆರ್.ದೀಪ್ತಿ ತರಗತಿ ನಡೆಸಿಕೊಡಲಿದ್ದಾರೆ. ಕ್ಯಾನ್ಸರ್ ಬಗ್ಗೆ ಅರಿವು, ಕಾರಣಗಳು, ಅಪಾಯಗಳು, ಸಮಾಜದಲ್ಲಿ ಹರಡುವಿಕೆ ಮತ್ತು ನಿಯಮಿತ ತಪಾಸಣೆ ಮತ್ತು ಸ್ಕ್ರೀನಿಂಗ್‍ಗಳ ಮೂಲಕ ಆರಂಭಿಕ ಪತ್ತೆಯ ಪ್ರಾಮುಖ್ಯತೆಯ ಕುರಿತು ತಿಳಿಸುವರು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ (8129364793, 8590564116) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




