HEALTH TIPS

ಪೊಸಡಿಗುಂಪೆಯ ತಟಿಯಲ್ಲಿ ಕಲರವ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ

         



                ಕುಂಬಳೆ: ಯುವ ಪ್ರತಿಭೆಗಳನ್ನು ಗುರುತಿಸಿ, ಭವಿಷ್ಯದಲ್ಲಿ ಉತ್ತಮ ಸಾಧಕರಾಗಿ ಬೆಳೆಸುವಲ್ಲಿ ಶಾಲಾ ಕಲೋತ್ಸವಗಳು ಬೆಂಬಲ ನೀಡಿ ಪರಿಪೋಶಿಸುತ್ತದೆ. ಆರ್ಥಿಕ, ಸಾಮಾಜಿಕ ಅಸ್ಥಿರತೆಯ ಭೇದವಿಲ್ಲದೆ ಎಳವೆಯಲ್ಲೇ ವೇದಿಕೆಯ ಮೂಲಕ ಕಲಾಭಿವ್ಯಕ್ತಿತ್ವವನ್ನು ಬೆಳೆಸಲು ಈ ಕಲೋತ್ಸವ ಉತ್ತಮ ಮಾಧ್ಯಮವಾಗಿದೆ. ಆಧುನಿಕ ಮಾಧ್ಯಮಗಳಲ್ಲಿ ಕಲಾಪ್ರದರ್ಶನಗಳಿಗೆ ಮುನ್ನುಡಿಯಾಗಿ ಶಾಲಾ ಕಲೋತ್ಸವ ಆರಂಭಿಕ ಪ್ರೇರಣೆ ನೀಡುತ್ತದೆ. ಸಂಘಟನಾತ್ಮಕವಾಗಿ ನಾಡಿನ ಜನತೆ ಈ ಉತ್ಸವಕ್ಕೆ ಬೆಂಬಲ ನೀಡುತ್ತಿರುವುದು ಹೆಮ್ಮೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು.

         ಧರ್ಮತ್ತಡ್ಕದ  ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಆಯೋಜನೆಗೊಂಡಿರುವ  ಮಂಜೇಶ್ವರ ಉಪಜಿಲ್ಲಾ 62ನೇ ಶಾಲಾ ಕಲೋತ್ಸವವನ್ನು ಬುಧವಾರ ಬೆಳಿಗ್ಗೆ ಅಧಿಕೃತ ಉದ್ಘಾಟನೆ ನೆರವೇರಿಸಿ  ಅವರು ಮಾತನಾಡಿದರು.

           ಅಧ್ಯಕ್ಷತೆ ವಹಿಸಿದ್ದ ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅವರು ದೀಪ ಬೆಳಗಿಸಿ ಮಾತನಾಡಿ, ಕೇರಳ ಜನತೆಯ ವಿದ್ಯಾಭ್ಯಾಸ, ಕಲೆ, ಸಾಹಿತ್ಯ, ಕ್ರೀಡೆಗಳ ಆಸಕ್ತಿ, ಉತ್ಸಾಹಗಳು ಮೇರುಮಟ್ಟದ್ದು. ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಉಚಿತ ಶಿಕ್ಷಣ, ಶಿಕ್ಷಣೇತರ ಚಟುವಟಿಕೆಗಳಿಂದ ಜನಪರವಾಗಿ ಎಂದಿಗೂ ಮುನ್ನೆಲೆಯಲ್ಲಿದೆ. ಶಾಲಾ ಕಲೋತ್ಸವ ತಳಮಟ್ಟದಿಂದ ರಾಜ್ಯಮಟ್ಟದ ವರೆಗೂ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವ ಮಹತ್ತರ ಸಾಂಸ್ಕøತಿಕ ಚಟುವಟಿಕೆಯಾಗಿ ಏಷ್ಯಾದಲ್ಲೇ ಖ್ಯಾತಿವೆತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಯುವ ಸಮುದಾಯದ ವಿವಿಧ ಆಯಾಮಗಳ ಸಾಧನೆ  ಕಳಶಪ್ರಾಯ ಎಂದು ತಿಳಿಸಿದರು.


       ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತಿಗೆ ಗ್ರಾ.ಪಂ.ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಎಂ.ಎಚ್. ಅವರು ಮಾತನಾಡಿ,  1956ರಲ್ಲಿ ಆರಂಭಗೊಂಡ ರಾಜ್ಯಮಟ್ಟದ ವರೆಗೆ ವಿಸ್ತರಿಸಲ್ಪಡುವ ಶಾಲಾ ಕಲೋತ್ಸವ, ಏಷ್ಯಾದಲ್ಲೇ ಅತಿದೊಡ್ಡ ಸಾಂಸ್ಕøತಿಕ ಸ್ಪರ್ಧಾ ಕಣವಾಗಿ ಕೇರಳ ಕಲೋತ್ಸವ ಮಹತ್ವಪಡೆದಿದೆ. ವಿದ್ಯಾಭ್ಯಾಸದಲ್ಲಿ ರಾಷ್ಟ್ರದಲ್ಲೇ ಅತ್ಯುಚ್ಚ ಸ್ಥಾನದಲ್ಲಿರುವ ಕೇರಳ ಶಾಲಾ ಶಿಕ್ಷಣದ ಜೊತೆಗೆ ಮಕ್ಕಳ ಪ್ರತಿಭಾ ಅನಾವರಣಕ್ಕೂ ಅವಕಾಶ ನೀಡುತ್ತಿರುವುದು ಹೆಮ್ಮೆ. ಕಾಲಾಕಾಲಕ್ಕೆ ವಿದ್ಯಾಭ್ಯಾಸದ ಜೊತೆಜೊತೆಗೆ ಕಲೆ-ಕ್ರೀಡೆಗಳ ಬೆಳವಣಿಗೆಗೆ ಬೆಂಬಲ ನೀಡಲು ಯೋಜನೆಗಳನ್ನು ಅನುಮೋದಿಸುವ ಮೂಲಕ ಕ್ರಿಯಾತ್ಮಕವಾಗಿದೆ. ಗಡಿ ಗ್ರಾಮವಾದ ಧರ್ಮತ್ತಡ್ಕದ ವಿದ್ಯಾಸಂಸ್ಥೆ ಶತಮಾನಗಳಿಂದ ಜ್ಞಾನ ಪ್ರಸರಣ ಕೈಂಕರ್ಯದಲ್ಲಿ ಮೇರು ಸಾಧನೆಗೈದು ನಾಡಿಗೆ ಹೆಮ್ಮ ತಂದ ಶಾಲೆ ಎಂದರು.

        ಸಮಾರಂಭದಲ್ಲಿ ಕಲೋತ್ಸವ ಪ್ರಚಾರ ಸಮಿತಿ ನಿರ್ಮಿಸಿದ ಆಡಿಯೊ ಸಿ.ಡಿ.ಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರ ಎಸ್.ಎಚ್. ಬಿಡುಗಡೆಗೊಳಿಸಿದರು. ಮಜಿಬೈಲು ಸರ್ಕಾರಿ ಶಾಲಾ ಶಿಕ್ಷಕ ದೇವಾನಂದ ರಚಿಸಿ, ಬೇಕೂರು ಸರ್ಕಾರಿ ಶಾಲಾ ಶಿಕ್ಷಕ ಮೆಲ್ವಿನ್ ಡಿಸೋಜ ಈ ಸಿ.ಡಿ.ಧ್ವನಿ ಸುರುಳಿಗೆ ಸಂಗೀತ ನೀಡಿದ್ದಾರೆ. 


               ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲಾ.ಪಂ.ಸದಸ್ಯ, ಚಂದ್ರಾವತಿ ಎಂ., ಗ್ರಾ.ಪಂ. ಸದಸ್ಯ ಗಂಗಾಧರ, ಸದಸ್ಯೆ ಜಯಂತಿ, ಅಶೋಕ್ ಭಂಡಾರಿ, ಪಿಟಿಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು, ಪ್ರಬಂಧಕ ಶಂಕರ ನಾರಾಯಣ ಭಟ್, ಮಂಜೇಶ್ವರ ಎಚ್ ಎಂ ಪೋರಂ ಕಾರ್ಯದರ್ಶಿ. ಶ್ಯಾಮ್ ಭಟ್ ಚೇವಾರು, ಹೈಸ್ಕೂಲ್ ವಿಭಾಗದ ಮಾತೃಸಂಘದ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಸಹ ಸಂಚಾಲಕ ಮಹಾಲಿಂಗ ಭಟ್(ಯುಪಿ ಎಚ್ ಎಂ), ಜಯಂತಿ,  ಕಾವ್ಯಶ್ರೀ ಪಿ.ಕೆ, ಇರ್ಶಾನ ಎಸ್, ಪುಷ್ಪಲಕ್ಷ್ಮಿ ಎನ್, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕೋಳಾರು ಸತೀಶ್ಚಂದ್ರ ಭಂಡಾರಿ  ಮೊದಲಾದವರು ಉಪಸ್ಥಿತರಿದ್ದರು. ಕಲೋತ್ಸವ ಲಾಂಛನವನ್ನೂ ಬಿಡುಗಡೆಗೊಳಿಸಲಾಯಿತು.

     ಇದಕ್ಕೂ ಮೊದಲು ಶಾಲಾ ಪ್ರಬಂಧಕಿ ಶಾರದಮ್ಮ ಧ್ವಜಾರೋಹಣ ನೆರವೇರಿಸಿದರು. ಕಲೋತ್ಸವದ ಪ್ರಧಾನ ಸಂಚಾಲಕ, ಧರ್ಮತ್ತಡ್ಕ ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿದರು. ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರ ಎಸ್.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈಸ್ಕೂಲ್ ಮುಖ್ಯೋಪಾಧ್ಯಾಯ, ಇ.ಎಚ್.ಗೋವಿಂದ ಭಟ್ ವಂದಿಸಿದರು. ಸ್ವಾಗತ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಾಂಪ್ರದಾಯಿಕ ಮೆರವಣಿಗೆಗಳೊಂದಿಗೆ ವೇದಿಕೆಗೆ ಸ್ವಾಗತಿಸಲಾಯಿತು. ನ.10ರ ವರೆಗೆ ಉಪಜಿಲ್ಲೆಯ 112 ಶಾಲೆಗಳ 4 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಧರ್ಮತ್ತಡ್ಕ ಶಾಲೆಯಲ್ಲಿ ಇದು 6ನೇ ಬಾರಿ ಕಲೋತ್ಸವ ಆಯೋಜನೆಗೊಂಡಿದ್ದು, ಈ ಮೊದಲು 1997, 2004, 2007, 2011, 2016 ರಲ್ಲಿ ನಡೆದಿತ್ತು. 







Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries