ಕೋಝಿಕ್ಕೋಡ್: ಮತದಾನದ ವೇಳೆ ಉಂಟಾದ ವಿವಾದಗಳ ಬೆನ್ನಲ್ಲೇ ಕುಂದಮಂಗಲಂ ಸರ್ಕಾರಿ ಕಾಲೇಜಿನಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ.
ಇದಕ್ಕಾಗಿ ಕಾಲೇಜು ಅಧಿಕಾರಿಗಳು ಕ್ಯಾಲಿಕಟ್ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಎಸ್‍ಎಫ್‍ಐನವರು ಮತಯಂತ್ರ ಹಾನಿಗೊಳಿಸಿದ್ದಾರೆ ಎಂಬ ಆರೋಪದ ಮೇಲೆ ವಾಗ್ವಾದ ನಡೆದಿದೆ.
ಘರ್ಷಣೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಪೋಲೀಸರು ಎಸ್‍ಎಫ್‍ಐ-ಕೆಎಸ್‍ಯು ಕಾರ್ಯಕರ್ತರ ಹತ್ತು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಕುಂದಮಂಗಲಂ ಪೋಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಕಾಲೇಜಿಗೂ ಎರಡು ದಿನ ರಜೆ ಘೋಷಿಸಲಾಗಿದೆ.
ಮತ್ತೊಮ್ಮೆ ಚುನಾವಣೆ ನಡೆಸುವಂತೆ ಕೋರಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸಿದ್ದೇವೆ ಎಂದು ಪ್ರಾಂಶುಪಾಲ ಜಿಸಾ ಜೋಸ್ ತಿಳಿಸಿದ್ದಾರೆ. ಘರ್ಷಣೆಯಿಂದಾಗಿ ಫಲಿತಾಂಶ ಘೋಷಣೆಯನ್ನು ತಡೆಹಿಡಿಯಲಾಗಿದೆ.




