ತಿರುವನಂತಪುರಂ: ತಿರುವನಂತಪುರಂನಲ್ಲಿ ರಾಜ್ಯ ಸರ್ಕಾರದ ಕೇರಳೀಯಂ ಮೇಳ ಆರಂಭವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೀಪ ಬೆಳಗಿಸುವ ಮೂಲಕ ಕೇರಳೀಯಂ ನ್ನು ಉದ್ಘಾಟಿಸಿದರು.
ಸಚಿವ ಕೆ.ರಾಜನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯದರ್ಶಿ ವೇಣು ಕೇರಳದ ಚಟುವಟಿಕೆ ವರದಿ ಮಂಡಿಸಿದರು. ಕೇರಳೀಯಂ ಸಂಘಟನಾ ಸಮಿತಿ ಅಧ್ಯಕ್ಷ, ಸಚಿವ ವಿ.ಶಿವನ್‍ಕುಟ್ಟಿ ಮಾತನಾಡಿದರು.
ಸಿನಿಮಾ ತಾರೆಯರಾದ ಕಮಲಹಾಸನ್. ಮಮ್ಮುಟ್ಟಿ, ಮೋಹನ್ ಲಾಲ್, ಶೋಭನಾ, ಮಂಜು ವಾರಿಯರ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಸಮಾರಂಭ ನಡೆದ ಕೇಂದ್ರ ಕ್ರೀಡಾಂಗಣಕ್ಕೆ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಮುಖಂಡರು ಕೂಡ ಆಗಮಿಸಿದ್ದರು.
ನವೆಂಬರ್ 7 ರವರೆಗೆ 44 ಸ್ಥಳಗಳಲ್ಲಿ ಕೇರಳೀಯಂ ನ್ನು ಆಯೋಜಿಸಲಾಗಿದೆ. ಕೇರಳದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳಗಳು, ವಿಚಾರ ಸಂಕಿರಣಗಳು, ಪ್ರದರ್ಶನಗಳಂತಹ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಏರ್ಪಡಿಸಿದೆ.
ಕೇರಳದ ಜತೆಗೆ ಶಾಸಕಾಂಗ ಪುಸ್ತಕೋತ್ಸವವನ್ನೂ ಆಯೋಜಿಸಲಾಗುತ್ತಿದ್ದು, ಒಟ್ಟಾರೆ ಕೊಡುಗೆಗಾಗಿ ಮುಖ್ಯಮಂತ್ರಿಗಳು ಮಲಯಾಳಂನ ಪ್ರೀತಿಯ ಬರಹಗಾರ ಎಂ.ಟಿ.ವಾಸುದೇವನ್ ನಾಯರ್ ಅವರಿಗೆ ‘ಶಾಸಕಾಂಗ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.





