ತಿರುವನಂತಪುರ: ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಖಜಾನೆಯಿಂದ ಹೆಚ್ಚಿನ ಮೊತ್ತ ಖರ್ಚು ಮಾಡಿ ಕನ್ನಡಕ ಖರೀದಿಸಿದ ಘಟನೆಯನ್ನು ಸಚಿವೆ ಆರ್.ಬಿಂದು ಸಮರ್ಥಿಸಿಕೊಂಡಿದ್ದಾರೆ.
ತಾವು ಮಾತ್ರವಲ್ಲದೆ ಕಾಂಗ್ರೆಸ್ ಶಾಸಕರಾದ ಎಲ್ದೋಸ್ ಕುನ್ನಪ್ಪಿಳ್ಳಿ ಮತ್ತು ಟಿಜೆ ವಿನೋದ್ ಕೂಡ ಇಂತಹ ಕನ್ನಡಕ ಖರೀದಿಸಿದ್ದಾರೆ ಎಂದು ಸಚಿವರು ಬಹಿರಂಗಪಡಿಸಿದ್ದಾರೆ. ಕಂಪ್ಯೂಟರ್ ಓದುವುದು ಮತ್ತು ಬಳಸುವುದರಿಂದ 30,500 ರೂ.ಗಳ ಕನ್ನಡಕವನ್ನು ಖರೀದಿಸಿದೆ ಎಂದು ಆರ್. ಬಿಂದು ಸಮರ್ಥನೆ ನೀಡಿದ್ದಾರೆ.
'ನಾನು ತುಂಬಾ ಓದುತ್ತೇನೆ ಮತ್ತು ಕಂಪ್ಯೂಟರ್ ನೋಡುತ್ತೇನೆ. ಹಾಗಾಗಿ ಅದಕ್ಕೆ ತಕ್ಕ ಕನ್ನಡಕ ಖರೀದಿಸಿದ್ದೇನೆ. ನಾನμÉ್ಟೀ ಅಲ್ಲ, ಎಲ್ದೋಸ್ ಕುನ್ನಪ್ಪಿಳ್ಳಿ ಕನ್ನಡಕಕ್ಕಾಗಿ 35,842 ರೂ., ಟಿ.ಜೆ.ವಿನೋದ್ 31,600 ರೂ. ಪಡೆದಿದ್ದಾರೆ' ಎಂದು ಸಚಿವೆ ಆರ್. ಬಿಂದು ಮಾಧ್ಯಮಗಳಿಗೆ ತಿಳಿಸಿದರು. ಮಹಿಳಾ ಕಾಂಗ್ರೆಸ್ ಪ್ರತಿಭಟನೆಯ ನಂತರ ಸಚಿವರು ಕಾಂಗ್ರೆಸ್ ಮುಖಂಡರ ಹೆಸರನ್ನು ಬಹಿರಂಗಪಡಿಸಿದ್ದಾರೆ.




.webp)
