ನವದೆಹಲಿ: ಎಲ್ಲಾ ರಾಷ್ಟ್ರಗಳ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವ ನಿರ್ಣಯಗಳನ್ನು ಭಾರತ ಗೌರವಿಸುತ್ತದೆ. ಅಲ್ಲದೆ ಅಂತರರಾಷ್ಟ್ರೀಯ ನಿಯಮಗಳಿಗೆ ಬದ್ಧವಾಗಿರುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಶುಕ್ರವಾರ ಹೇಳಿದರು.
0
samarasasudhi
ನವೆಂಬರ್ 04, 2023
ನವದೆಹಲಿ: ಎಲ್ಲಾ ರಾಷ್ಟ್ರಗಳ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವ ನಿರ್ಣಯಗಳನ್ನು ಭಾರತ ಗೌರವಿಸುತ್ತದೆ. ಅಲ್ಲದೆ ಅಂತರರಾಷ್ಟ್ರೀಯ ನಿಯಮಗಳಿಗೆ ಬದ್ಧವಾಗಿರುತ್ತದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಶುಕ್ರವಾರ ಹೇಳಿದರು.
'ಚಾಣಕ್ಯ ರಕ್ಷಣಾ ಸಂವಾದ' ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಜಗತ್ತಿನಾದ್ಯಂತ ಹೊಸ ಪ್ರದೇಶಗಳಲ್ಲಿ ರಕ್ಷಣಾ ಘಟಕಗಳನ್ನು ತೆರೆಯುತ್ತಿದೆ. ಉತ್ತಮ ಸಂಬಂಧ ಹೊಂದಿರುವ ದೇಶಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಲು ಭಾರತ ಉತ್ಸುಕವಾಗಿದೆ ಎಂದು ತಿಳಿಸಿದರು.
ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇದರ ನಡುವೆಯೂ ಅವಕಾಶಗಳು ಮತ್ತು ಸಂಘಟಿತ ಹೋರಾಟದ ಶಕ್ತಿ ನಮ್ಮಲ್ಲಿದೆ ಎಂದು ಹೇಳಿದರು.
ಚಾಣಕ್ಯ ರಕ್ಷಣಾ ಸಂವಾದ ಕಾರ್ಯಕ್ರಮವನ್ನು ಭಾರತೀಯ ಸೇನೆಯು ಆಯೋಜಿಸಿತ್ತು. ದಕ್ಷಿಣ ಏಷ್ಯಾ ಮತ್ತು ಇಂಡೊ-ಪೆಸಿಫಿಕ್ ಪ್ರದೇಶದ ಭದ್ರತಾ ಸವಾಲುಗಳ ಕುರಿತ ಸಮಗ್ರ ವಿಶ್ಲೇಷಣೆ ಇದರ ಉದ್ದೇಶವಾಗಿದೆ.