ಬದಿಯಡ್ಕ: ಏತಡ್ಕದ ಡಾ. ವೈ. ಕೆ. ಕೇಶವ ಭಟ್ ಪ್ರಾಥಸ್ಮರಣೀಯ, ನಿಸ್ವಾರ್ಥ ಸೇವಕ, ಸಮಾಜ ಸುಧಾರಕ, ಬಡವರ ಬಂಧು, ರಾಜಕೀಯ ಧುರೀಣ, ಹಾಗೂ ಧಾರ್ಮಿಕ ಮುಂದಾಳು ಎಂದು ಏತಡ್ಕ ಗ್ರಾಮ ಸೇವಾಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜಮಂದಿರದಲ್ಲಿ ಬುಧವಾರ ನಡೆದ ಡಾ ವೈ. ಕೆ. ಕೇಶವ ಭಟ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಮಹಾಲಿಂಗ ಪ್ರಕಾಶ್ ಕೀರಿಕ್ಕಾಡು ಹೇಳಿದರು.
ಗ್ರಂಥಾಲಯದ ಅಧ್ಯಕ್ಷ ವೈ.ಕೆ ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ವೈ.ಕೆ. ಕೇಶವ ಭಟ್ ಅವರು, ಯುವಕರನ್ನು ಸಮಾಜಮುಖೀ ಕಾರ್ಯಕ್ರಮಗಳಿಗೆ ತೊಡಗಿಸಿಕೊಂಡ ಯುವಜನ ಮುಂದಾಳು ಎಂದು ಅಭಿಪ್ರಾಯಪಟ್ಟರು. ಹವ್ಯಾಸಿ ಪರ್ತಕರ್ತ ಹಾಗೂ ಛಾಯಾಗ್ರಾಹಕ ಚಂದ್ರಶೇಖರ ಏತಡ್ಕ, ಡಾ. ವೇಣುಗೋಪಾಲ ಕಳೆಯತ್ತೋಡಿ, ಏತಡ್ಕ ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಕವಿ ನರಸಿಂಹ ಭಟ್ ಕಟ್ಟದಮೂಲೆ ಸ್ವರಚಿತ ಕವನವನ್ನು ವಾಚಿಸಿದರು. ಮಾಲತಿ ವೈ. ಜಿ ಭಟ್ ಏತಡ್ಕ ಭಾವಗೀತೆ ಹಾಡಿದರು. ವೈ. ವಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ.ಕೆ ಏತಡ್ಕ ವಂದಿಸಿದರು. ಡಾ. ವೈ. ಕೆ ಕೇಶವ ಭಟ್ಟರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.




.jpg)
