ಕಾಸರಗೋಡು: ಮಾದಕವಸ್ತು ದಂಧೆಕೋರರಿಗೆ ಸಿಂಹಸ್ವಪ್ನವಾಗಿದ್ದ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅವರನ್ನು ವರ್ಗಾವಣೆಗೊಳಿಸಲಾಗಿದ್ದು, ಇವರ ಸಥಾನಕ್ಕೆ ತಿರುವನಂತಪುರ ರೇಂಜ್ ಸ್ಪೆಶ್ಯಲ್ ಬ್ರಾಂಚ್ ಎಸ್.ಪಿ ಆಗಿರುವ ಬಿ. ಬಿಜೋಯ್ ಅವರನ್ನು ನೇಮಕಗೊಳಿಸಲಾಗಿದೆ.
ತಿರುವನಂತಪುರ ನಿವಾಸಿಯಾಗಿರುವ ಇವರು, ಕಾಸರಗೋಡಿನ ಮಂಜೇಶ್ವರ ಠಾಣೆಗೆ ಎಸ್.ಐ ಆಗಿ ನೇಮಕಗೊಂಡ ನಂತರ ಸಿ.ಐ, ಡಿವೈಎಸ್‍ಪಿ ಆಗಿ ಬಡ್ತಿಗೊಂಡು2015ರಲ್ಲಿ ಮುಖ್ಯಮಂತ್ರಿಯಿಂದ ಚಿನ್ನದ ಪದಕ, 2018ರಲ್ಲಿ ರಾಷ್ಟ್ರಪತಿಯಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 2005ರಲ್ಲಿ ಕೊಸುವೂನಲ್ಲಿ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲೂ ಸೇವೆ ಸಲ್ಲಿಸಿದ್ದರು. ಇವರ ವಿಶಿಷ್ಟ ಸೇವೆ ಪರಿಗಣಿಸಿ 2019ರಲ್ಲಿ ಇವರಿಗೆ ಐಪಿಎಸ್ ಪದವಿ ನೀಡಲಾಗಿತ್ತು.
ಕಾಸರಗೋಡಿನ ಹಾಲಿ ಎಸ್.ಪಿ ಡಾ. ವೈಭವ್ ಸಕ್ಸೇನಾ ಅವರನ್ನು ಎರ್ನಾಕುಳಂ ಗ್ರಾಮಾಂತರ ಎಸ್.ಪಿಯಾಗಿ ನಿಯೋಜಿಸಲಾಗಿದೆ.





