ಕಾಸರಗೋಡು :ಮೀನುಗಾರರ ಅಭಿವೃದ್ಧಿಗಾಗಿ ಕೇಂದ್ರ ಆವಿಷ್ಕರಿಸಿರುವ ಯೋಜನೆಗಳನ್ನು ಕೇರಳ ಸರ್ಕಾರ ಬುಡಮೇಲುಗೊಳಿಸುತ್ತಿರುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್ ತಿಳಿಸಿದ್ದಾರೆ.
ಕರಾವಳಿಯಲ್ಲಿ ಕೇಂದ್ರಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಬೇಕು, ಕೇರಳವನ್ನು ಎಡ ಹಾಗೂ ಬಲ ರಂಗಗಳು ಅವಗಣಿಸುವ ಧೋರಣೆ ಕೊನೆಗೊಳಿಸಬೇಕು ಮುಂತಾದ ಘೋಷಣೆಗಳೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಚೆರ್ವತ್ತೂರಿನಿಂದ ಆರಂಭಿಸಿದ್ದ ಕರಾವಳಿ ಯಾತ್ರೆಯ ಸಮಾರೋಪ ಸಮಾರಂಭವನ್ನು ಕಾಸರಗೋಡು ಕಡಪ್ಪುರದಲ್ಲಿ ಉದ್ಘಾಟಿಸಿ ಮಾತನಾಡಿದರು. ಮೀನುಗಾರರ ಆದಾಯ ಹೆಚಿಸುವ ನಿಟ್ಟಿನಲ್ಲಿ ಮೀನುಗಾರರಿಗೆ ಅತ್ಯಾಧುನಿಕ ಬೋಟ್ ಖರೀದಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಪತ್ಸ್ಯ ಸಂಪದ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕೇರಳ ಸರ್ಕಾರ ತೋರಿದ ನಿರ್ಲಕ್ಷ್ಯ ಧೋರಣೆಯಿಂದ ನೂರಾರು ಕುಟುಂಬUಕ್ಷ್ಯೀ ಅವಕಾಶದಿಂದ ವಂಚಿತವಾಗಿದೆ. ಮೀನುಗಾರರಿಗೆ ವಿತರಿಸಲು ಜಲಜೀವನ್ ಮಿಷನ್ ಯೋಜನೆಯನ್ನೂ ಸರ್ಕಾರ ಸಪರ್ಮಕವಾಗಿ ಜಾರಿಗೊಳಿಸಿಲ್ಲ. ಒಂದೆಡೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಂiಮೀನುಗಾರರಿಗಾಗಿ ಸಮರ್ಪಕ ಯೋಜನೆಯನ್ನೂ ರೂಪಿಸದೆ ನಿರ್ಲನಿರ್ಲಕ್ಷ್ಯ ತೋರುವ ಮೂಲಕ ರಾಜ್ಯದ ಮೀನುಗಾರರನ್ನು ವಂಚಿಸುತ್ತಿರುವುದಾಗಿ ಆರೋಪಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ ಅಧ್ಯಕ್ಷತೆ ವಹಿಸಿದ್ದರು.ಎ. ವೇಲಾಯುಧನ್, ಎನ್. ಮಧುಲಾಲ್ ಮೇಲತ್, ಎಂ. ಬಲರಾಜ್ ಮೊದಲಾದವರು ಉಪಸ್ಥಿತರಿದ್ದರು.




