ಬದಿಯಡ್ಕ: ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ 48 ನೇ ವಾರ್ಷಿಕೋತ್ಸವದ ಅಂಗವಾಗಿ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವ ಡಿಸೆಂಬರ್ ನ. 24ರಿಂದ 26ರ ವರೆಗೆ ಜರುಗಲಿದೆ.
ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಗುರುಸ್ವಾಮಿಗಳ ಸಂಗಮ ಕಾರ್ಯಕ್ರಮ ಭಜನಾ ಮಂದಿರದಲ್ಲಿ ಜರುಗಿತು. ಧಾರ್ಮಿಕ ಮುಂದಾಳು, ಉದ್ಯಮಿ ಬಿ. ನಿತ್ಯಾನಂದ ಶೆಣೈ ಬದಿಯಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದಯಕೇಶವ ಭಟ್ ಕೋರಿಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಗುರುಸ್ವಾಮಿ, ಗುಣಾಜೆ ರಾಮಕೃಷ್ಣ ಭಟ್, ಬಾಳಕುಮೇರಿ ವಿಷ್ಣು ಮಾಸ್ಟರ್, ಅಣ್ಣು ನಾಯ್ಕ, ರಾಮದಾಸ್ ಶಾನುಬೋಗ್, ಕೃಷ್ಣ ಉದಯಗಿರಿ, ದೇವದಾಸ್, ವೀಣಾ ಆರ್.ಶೆಣೈ, ಉಷಾ ರಾಮನ್, ಸಹಿತ ಹಲವು ಗಣ್ಯರು, ವಿವಿದ ಭಜನಾ ಮಂದಿರಗಳ ಗುರುಸ್ವಾಮಿಗಳು ಭಾಗವಹಿಸಿದ್ದರು. ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿದರು. ಸಿಂಧು ವಂದಿಸಿದರು.





