HEALTH TIPS

ಕೋವಿಡ್ ಬೂಸ್ಟರ್ ಲಸಿಕೆಯ ಅರ್ಧ ಡೋಸ್‌ ಕೂಡ ಪೂರ್ಣದಷ್ಟೇ ಪರಿಣಾಮಕಾರಿ: ವರದಿ

                ಸ್ಯಾನ್‌ ಫ್ರ್ಯಾನ್ಸಿಸ್ಕೊ: ಕೋವಿಡ್‌-19 ನಿಯಂತ್ರಣದ ಸಲುವಾಗಿ ನೀಡಲಾಗುವ ಬೂಸ್ಟರ್‌ ಡೋಸ್‌ ಲಸಿಕೆಯ ಅರ್ಧ ಡೋಸ್‌ ಕೂಡ, ಪೂರ್ತಿ ಡೋಸ್‌ನಷ್ಟೇ ಪರಿಣಾಮಕಾರಿ ಎಂದು ಅಧ್ಯಯನ ವರದಿ ತಿಳಿಸಿದೆ.

                 ಮರ್ಡೋಚ್‌ ಮಕ್ಕಳ ಸಂಶೋಧನಾ ಸಂಸ್ಥೆ (ಎಂಸಿಆರ್‌ಐ) ಹಾಗೂ ಸಾಂಕ್ರಾಮಿಕ ರೋಗಗಳ ಕುರಿತಾದ ಮಂಗೋಲಿಯಾ ರಾಷ್ಟ್ರೀಯ ಸಂಸ್ಥೆ ನಡೆಸಿದ ಸಂಶೋಧನೆಯನ್ನು ಉಲ್ಲೇಖಿಸಿ 'ದಿ ಲ್ಯಾನ್ಸೆಟ್‌ ರೀಜನಲ್‌ ಹೆಲ್ತ್‌ - ವೆಸ್ಟರ್ನ್‌ ಪೆಸಿಫಿಕ್‌' ನಿಯಕತಾಲಿಕೆ ವರದಿ ಮಾಡಿದೆ.

               ಕೋವಿಡ್‌ ನಿಯಂತ್ರಣಕ್ಕೆ ನೀಡುವ 'ಫೈಜರ್' ಬೂಸ್ಟರ್‌ ಲಸಿಕೆಯ ಅರ್ಧ ಡೋಸ್‌, ಈ ಹಿಂದೆ 'ಆಸ್ಟ್ರಾಜೆನಿಕಾ' ಬೂಸ್ಟರ್‌ ಲಸಿಕೆಯ ಪೂರ್ತಿ ಡೋಸ್‌ ಪಡೆದಿದ್ದ ಮಂಗೋಲಿಯಾದ ವಯಸ್ಕರಲ್ಲಿ ಪೂರ್ಣ ಪ್ರಮಾಣದ ಪ್ರತಿಕಾಯ ಸಾಮರ್ಥ್ಯವನ್ನು ಉತ್ಪಾದಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ, ಸ್ಪುಟ್ನಿಕ್‌ ವಿ ಲಸಿಕೆಯ ಅರ್ಧ ಡೋಸ್‌ ವಯಸ್ಕರಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಲಾರದು ಎಂಬದೂ ಸಂಶೋಧನೆಯಿಂದ ತಿಳಿದುಬಂದಿದೆ.

                 18 ವರ್ಷ ಮೇಲ್ಪಟ್ಟ 601 ಮಂದಿ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲ ಲಸಿಕೆ ಪಡೆದ ನಂತರದ 28 ದಿನಗಳವರೆಗಿನ ಪರಿಣಾಮಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries