ವಯನಾಡ್: ನಕ್ಸಲ್ ಭಯೋತ್ಪಾದಕರ ಎನ್‍ಕೌಂಟರ್ ಬಗ್ಗೆ ಎಡಿಜಿಪಿ ಎಂಆರ್ ಅಜಿತ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ‘‘ಕಳೆದ ಒಂದು ತಿಂಗಳಿನಿಂದ ನಕ್ಸಲ್ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಇದರ ಭಾಗವಾಗಿ ಮೊನ್ನೆ ರಾತ್ರಿ ನಡೆಸಿದ ತಪಾಸಣೆಯಲ್ಲಿ ಇಬ್ಬರು ನಕ್ಸಲ್ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಚಂದ್ರು ಮತ್ತು ಉಣ್ಣಿಮಾಯ ಬಂಧಿತರು. ಪೋಲೀಸರು ಮತ್ತು ನಕ್ಸಲ್ ಗಳ ನಡುವೆ ಸುದೀರ್ಘ ಎನ್‍ಕೌಂಟರ್ ನಂತರ ದಾಳಿಕೋರರನ್ನು ಸದೆಬಡಿಯಲಾಯಿತು. ಅವರ ವಶದಿಂದ ಎಕೆ 47 ಸೇರಿದಂತೆ ಮಾರಕಾಸ್ತ್ರಗಳು ಮತ್ತು ಇತರ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಅಷ್ಟರಲ್ಲಿ ಇಬ್ಬರು ನಕ್ಸಲ್ ಗಳು ಪರಾರಿಯಾಗಿದ್ದಾರೆ. ಪೋಲೀಸರು ತಿಳಿಸಿರುವಂತೆ, À ಪರಾರಿಯಾದ ಇಬ್ಬರು ನಕ್ಸಲ್ ಭಯೋತ್ಪಾದಕರಲ್ಲಿ ಒಬ್ಬರು ಸುಂದರಿ ಮತ್ತು ಇನ್ನೊಬ್ಬರು ಲತಾ ಎಂದು ನಂಬಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಾಲಕ್ಕಾಡ್, ಕಣ್ಣೂರು, ಮಲಪ್ಪುರಂ, ವಯನಾಡ್ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ನಕ್ಸಲ್ ಭಯೋತ್ಪಾದಕರು ದಾಳಿ ನಡೆಸುತ್ತಿರುವುದು ಪೆÇಲೀಸರ ಗಮನಕ್ಕೆ ಬಂದಿದೆ. ಜಿಲ್ಲೆಗಳಲ್ಲಿ ಶೋಧ ಕಾರ್ಯವನ್ನು ಮುಂದುವರೆಸುವುದಾಗಿ ಪೆÇಲೀಸರು ತಿಳಿಸಿದ್ದಾರೆ ಮತ್ತು ಪರಾರಿಯಾಗಿರುವವರ ಶೋಧ ಆರಂಭಿಸಿದ್ದಾರೆ. ಬಂಧಿತ ಆರೋಪಿಗಳನ್ನು 5 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.





