ಲಂಡನ್: ಭಾರತ ಸಂಜಾತೆ, ಲೇಖಕಿ ನಂದಿನಿ ದಾಸ್ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ 'ಬ್ರಿಟಿಷ್ ಅಕಾಡೆಮಿ ಬುಕ್ ಫಾರ್ ಗ್ಲೋಬಲ್ ಕಲ್ಚರಲ್ ಅಂಡರ್‌ಸ್ಟ್ಯಾಂಡಿಂಗ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.
0
samarasasudhi
ನವೆಂಬರ್ 02, 2023
ಲಂಡನ್: ಭಾರತ ಸಂಜಾತೆ, ಲೇಖಕಿ ನಂದಿನಿ ದಾಸ್ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ 'ಬ್ರಿಟಿಷ್ ಅಕಾಡೆಮಿ ಬುಕ್ ಫಾರ್ ಗ್ಲೋಬಲ್ ಕಲ್ಚರಲ್ ಅಂಡರ್‌ಸ್ಟ್ಯಾಂಡಿಂಗ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.
'ಕೋರ್ಟಿಂಗ್ ಇಂಡಿಯಾ:ಇಂಗ್ಲೆಂಡ್, ಮೊಘಲ್ ಇಂಡಿಯಾ ಅಂಡ್ ದಿ ಒರಿಜಿನ್ಸ್ ಆಫ್ ಎಂಪೈರ್' ಎಂಬ ಅವರ ಕೃತಿಗೆ ಈ ಪ್ರಶಸ್ತಿ ಲಭಿಸಿದೆ.
ಬ್ರಿಟನ್ ಮೂಲದ ನಂದಿನಿ ದಾಸ್ ಅವರ ಮೊದಲ ಕೃತಿ ಹಲವಾರು ವಿಶಿಷ್ಟ ಒಳನೋಟಗಳನ್ನು ಹೊಂದಿದೆ. ಮೊಘಲರ ಕಾಲದಲ್ಲಿ ಸ್ಥಾಪಿತವಾದ ಬ್ರಿಟನ್ನಿನ ಮೊದಲ ರಾಜತಾಂತ್ರಿಕ ಸಂಬಂಧಗಳ ಮೂಲಕ ಬ್ರಿಟನ್ ಹಾಗೂ ಭಾರತ ನಡುವಿನ ಸಂಬಂಧವನ್ನು ವಿವರಿಸುವ ಪ್ರಯತ್ನವನ್ನು ಈ ಕೃತಿ ಮೂಲಕ ಲೇಖಕಿ ಮಾಡಿದ್ದಾರೆ' ಎಂದು ಬ್ರಿಟಿಷ್ ಅಕಾಡೆಮಿ ತಿಳಿಸಿದೆ.
49 ವರ್ಷದ ನಂದಿನಿ ದಾಸ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದಾರೆ.
17ನೇ ಶತಮಾನದಲ್ಲಿ ಮೊದಲ ರಾಯಭಾರಿಯಾಗಿ ಸರ್ ಥಾಮಸ್ ರೋ ಅವರು ಭಾರತಕ್ಕೆ ಬಂದಿಳಿದ ನಂತರ ಆರಂಭವಾಗುವ ಬ್ರಿಟಿಷ್ ಆಳ್ವಿಕೆಯನ್ನು ಹೊಸ ದೃಷ್ಟಿಕೋನದಿಂದ ಪ್ರಸ್ತುತ ಪಡಿಸುವ ಪ್ರಯತ್ನವನ್ನು ನಂದಿನಿ ದಾಸ್ ಮಾಡಿದ್ದಾರೆ.