ನವದೆಹಲಿ: ಸಹಕಾರ ಸಂಘಗಳಿಗೆ ಆರ್‍ಬಿಐ ಮತ್ತೆ ‘ಬ್ಯಾಂಕ್’ ಎಂಬ ಪದ ಬಳಸಬಾರದು ಎಂದು ಸ್ಪಷ್ಟಪಡಿಸಿದೆ.
ಇದು ರಾಜ್ಯದ 1625 ಸಹಕಾರಿ ಸಂಘಗಳಿಗೆ ಅನ್ವಯಿಸುತ್ತದೆ. ಆರ್‍ಬಿಐನ ಜಾಹೀರಾತಿನಲ್ಲಿ ಸಹಕಾರಿ ಸಂಘಗಳಲ್ಲಿನ ಹೂಡಿಕೆಗೆ ಯಾವುದೇ ರಕ್ಷಣೆ ಇಲ್ಲ ಎಂದೂ ಹೇಳಿದೆ.
ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಕಾಯ್ದೆಯ ಪ್ರಕಾರ, ಆರ್‍ಬಿಐ ಹೊರಡಿಸಿದ ಎಚ್ಚರಿಕೆಯ ನಿರ್ದೇಶನದ ಪ್ರಕಾರ ಸಹಕಾರ ಸಂಘಗಳು ತಮ್ಮ ಹೆಸರಿನಲ್ಲಿ 'ಬ್ಯಾಂಕ್', 'ಬ್ಯಾಂಕರ್' ಅಥವಾ 'ಬ್ಯಾಂಕಿಂಗ್' ಪದಗಳನ್ನು ಬಳಸಬಾರದು. ಕೆಲವು ಸಹಕಾರ ಸಂಘಗಳು ಬಿಆರ್ ಕಾಯ್ದೆಯ ಸೆಕ್ಷನ್ 7 ಅನ್ನು ಉಲ್ಲಂಘಿಸಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಎಂಬ ಪದವನ್ನು ಬಳಸುತ್ತಿರುವುದನ್ನು ಆರ್‍ಬಿಐ ಗಮನಿಸಿದೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಕೆಲವು ಸಹಕಾರ ಸಂಘಗಳು 1949 ರ ಬಿಆರ್ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿ ಸದಸ್ಯರಲ್ಲದ/ನಾಮಮಾತ್ರದ ಸದಸ್ಯರು/ಸಹ ಸದಸ್ಯರಿಂದ ಠೇವಣಿ ಸ್ವೀಕರಿಸುತ್ತಿರುವುದು ಆರ್‍ಬಿಐ ಗಮನಕ್ಕೆ ಬಂದಿದೆ, ಇದು ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವುದಕ್ಕೆ ಸಮಾನವಾಗಿದೆ. ಇಂತಹ ಸಹಕಾರ ಸಂಘಗಳಿಗೆ ಬ್ಯಾಂಕಿಂಗ್ ವ್ಯವಹಾರ ನಡೆಸಲು ಆರ್ ಬಿಐ ಪರವಾನಗಿ ನೀಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಅಂತಹ ಸಹಕಾರಿ ಠೇವಣಿಗಳನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾಪೆರ್Çರೇಷನ್ (ಡಿಐಸಿಜಿಸಿ) ಒಳಗೊಂಡಿರುವುದಿಲ್ಲ.
ಅಂತಹ ಸಹಕಾರಿ ಸಂಘಗಳು ಬ್ಯಾಂಕ್ ಎಂದು ಹೇಳಿಕೊಂಡರೆ ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ವಹಿವಾಟು ನಡೆಸುವ ಮೊದಲು ಆರ್‍ಬಿಐ ನೀಡಿರುವ ಬ್ಯಾಂಕಿಂಗ್ ಪರವಾನಗಿ ಇದೆಯೇ ಎಂದು ಪರಿಶೀಲಿಸಬೇಕು ಎಂದು ಆರ್‍ಬಿಐ ಹೊರಡಿಸಿದ ಎಚ್ಚರಿಕೆಯ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಆರ್‍ಬಿಐ ನಿಯಂತ್ರಿಸುವ ಅರ್ಬನ್ ಕೋಆಪರೇಟಿವ್ ಬ್ಯಾಂಕ್‍ಗಳನ್ನು ತಿಳಿಯಲು ವೆಬ್‍ಸೈಟ್‍ಗೆ ಭೇಟಿ ನೀಡಲು ಸಹ ಸೂಚಿಸಲಾಗಿದೆ.




