HEALTH TIPS

ಸಮೀಪಿಸುತ್ತಿರುವ ಲೋಕಸಭಾ ಚುನಾವಣೆ: ಮೀಸಲು ಅಸ್ತ್ರ ಪ್ರಯೋಗಿಸಿದ ಬಿಹಾರ ಸಿ.ಎಂ

               ಟ್ನಾ: ರಾಜ್ಯದಲ್ಲಿ ಇತರೆ ಹಿಂದುಳಿದ ಸಮುದಾಯದವರು (ಒಬಿಸಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 50ರಿಂದ ಒಟ್ಟು ಶೇ 65ಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೆ ಬಿಹಾರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ.

                 ಇದಕ್ಕೆ ಅಗತ್ಯವಿರುವ ಮಸೂದೆಯನ್ನು ಪ್ರಸಕ್ತಅಧಿವೇಶನದಲ್ಲಿಯೇ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

                   ಸದನದಲ್ಲಿ ಮಂಡನೆಯಾದ, ಬಿಹಾರ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಸಮೀಕ್ಷೆಯ ವರದಿ ಮೇಲಿನ ಚರ್ಚೆಯನ್ನು ಮುಕ್ತಾಯಗೊಳಿಸಿದ ವೇಳೆ ಅವರು ಈ ವಿಷಯ ಪ್ರಕಟಿಸಿದರು.

               'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಟ್ಟು ಮೀಸಲಾತಿ ಪ್ರಮಾಣ ಈಗ ಶೇಕಡ 17ರಷ್ಟಿದೆ. ಇದನ್ನು ಶೇ 22 ಆಗಲಿದೆ. ಅದೇ ರೀತಿಯಲ್ಲಿ, ಒಬಿಸಿ ಸಮುದಾಯಗಳಿಗೆ ಈಗಿರುವ ಮೀಸಲಾತಿ ಪ್ರಮಾಣ ಶೇ 30ರಿಂದ ಶೇ 43ಕ್ಕೆ ಹೆಚ್ಚಲಿದೆ.

                  ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ನೀಡಿರುವ ಮೀಸಲಾತಿ ಶೇ 10ರಷ್ಟು ಇದೆ. ಇದೂ ಸೇರಿದಂತೆ ರಾಜ್ಯದಲ್ಲಿನ ಒಟ್ಟಾರೆ ಮೀಸಲಾತಿ ಪ್ರಮಾಣ ಶೇ 75ರಷ್ಟು ಆಗಲಿದೆ.

ಬಿಹಾರದ ಜಾತಿ ಗಣತಿಯ ವರದಿ ಪ್ರಕಾರ, ಅತ್ಯಂತ ಹಿಂದುಳಿದ ವರ್ಗಗಳು ಸೇರಿದಂತೆ ಒಬಿಸಿ ಸಮುದಾಯದ ಪಾಲು ಒಟ್ಟು ಜನಸಂಖ್ಯೆಯಲ್ಲಿ ಶೇ 63ರಷ್ಟು ಇದೆ. ಎಸ್‌ಸಿ, ಎಸ್‌ಟಿ ಸಮುದಾಯಗಳ ಜನಸಂಖ್ಯೆಯು ಒಟ್ಟು ಜನ ಸಂಖ್ಯೆಯಲ್ಲಿ ಶೇ 21ಕ್ಕಿಂತ ತುಸು ಹೆಚ್ಚು ಇದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries