HEALTH TIPS

ಮೋದಿ ಲಕ್ಷ ಮೌಲ್ಯದ ಸೂಟ್‌ ಧರಿಸ್ತಾರೆ..ಆದರೆ ನಾನು ಟೀ ಶರ್ಟ್ ಮಾತ್ರ ಧರಿಸುತ್ತೇನೆ

               ತ್ನಾ : 'ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷ ರೂಪಾಯಿ ಮೌಲ್ಯದ ಸೂಟ್‌ಗಳನ್ನ ಧರಿಸುತ್ತಾರೆ. ಆದರೆ ನಾನು ಈ ಬಿಳಿ ಟೀ ಶರ್ಟ್‌ ಮಾತ್ರ ಧರಿಸುತ್ತೇನೆ' ಎಂದು ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

                ಮಧ್ಯಪ್ರದೇಶದ ಸತ್ನಾದಲ್ಲಿ ಶುಕ್ರವಾರ(ನ.10) ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ಪ್ರಧಾನಿ ಮೋದಿಯವರ ಭಾಷಣ ಕೇಳಿದ್ದೇನೆ.

               ಅವರು ಪ್ರತಿ ಭಾಷಣದಲ್ಲಿ ನಾನು ಒಬಿಸಿ ಸಮುದಾಯದವನು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಹೀಗೆ ಪದೇ ಪದೇ ಹೇಳುವ ಮೂಲಕ ಅವರು ಪ್ರಧಾನಿಯಾದರು. ಅಂಥವರು ಲಕ್ಷ ರೂಪಾಯಿ ಬೆಲೆ ಬಾಳುವ ಸೂಟ್‌ ಧರಿಸುತ್ತಾರೆ. ಒಮ್ಮೆ ಬಳಸಿದ ಬಟ್ಟೆಯನ್ನು ಮತ್ತೊಮ್ಮೆ ಬಳಸಿದ್ದನ್ನು ನೀವು ಎಂದಾದರು ಕಂಡಿದ್ದೀರಾ' ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

             'ನಾನು ಜಾತಿ ಆಧಾರಿತ ಜನಗಣತಿ ಬಗ್ಗೆ ಮಾತನಾಡಲು ಶುರು ಮಾಡಿದಾಗ ಮೋದಿ ಅವರ ಭಾಷಣದಿಂದ ಜಾತಿ ಕಣ್ಮರೆಯಾಯಿತು. ನಾನು ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ, ಭಾರತದಲ್ಲಿ ಜಾತಿ ಇಲ್ಲ ಎಂದು ಅವರು ಹೇಳತೊಡಗಿದರು' ಎಂದು ಕಿಡಿಕಾರಿದ್ದಾರೆ.

               'ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದರೆ, ಎಲ್ಲಾ ರಾಜ್ಯಗಳಲ್ಲಿ ಜಾತಿವಾರು ಜನಗಣತಿ ನಡೆಸುವುದು ನಮ್ಮ ಮೊದಲ ಹೆಜ್ಜೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ರಾಷ್ಟ್ರವ್ಯಾಪಿ ಜಾತಿವಾರು ಗಣತಿ ಸಮೀಕ್ಷೆ ನಡೆಸುತ್ತೇವೆ' ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries