ಕಾಸರಗೋಡು: ಕೇರಳ ರಸ್ತೆ ಸಾರಿಗೆ ನಿಗಮ ಸಇಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಯಾಗದಿರುವುದನ್ನು ವಿರೋಧಿಸಿ ಟ್ರಾನ್ಸ್‍ಪೆÇೀರ್ಟ್ ಡೆಮಾಕ್ರಟಿಕ್ ಫೆಡರೇಶನ್ (ಟಿಡಿಎಫ್-ಐಎನ್‍ಟಿಯುಸಿ) ವತಿಯಿಂದ ಕಾಸರಗೋಡು ಡಿಪೆÇೀ ಡಿಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಅಕ್ಟೋಬರ್ ತಿಂಗಳ ಸಂಬಳ ನೀಡದಿರುವುದನ್ನು ವಿರೋಧಿಸಿ ಸಂಘಟನೆ ವತಿಯಿಂದ ನೌಕರರು ಕೆಎಸ್‍ಆರ್‍ಟಿಸಿ ಡಿಪೆÇೀ ಡಿಟಿಒ ಕಚೇರಿ ಎದುರು ಧರಣಿ ನಡೆಸಿದರು. ಸಕಾಲಕ್ಕೆ ವೆತನ ಪಾವತಿಯಾಗದಿರುವುದರಿಂದ ಸಂಸ್ಥೆ ಕಾರ್ಮಿಕರ ಸ್ಥಿತಿ ಶೋಚನೀಯಾವಸ್ಥೆ ತಲುಪಿದ್ದರೂ, ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ನ್ಯಾಯಾಲಯದ ತೀರ್ಪಿಗೂ ಬೆಲೆ ನೀಡದೆ ವೇತನ ವಿಳಂಬಗೊಳಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಟ್ರಾನ್ಸ್‍ಪೆÇೀರ್ಟ್ ಡೆಮಾಕ್ರಟಿಕ್ ಫೆಡರೇಶನ್ ರಾಜ್ಯ ಉಪಾಧ್ಯಕ್ಷ ಬಿಜು ಜಾನ್, ಜಿಲ್ಲಾಧ್ಯಕ್ಷ ಜಲೀಲ್ ಮಲ್ಲಂ, ಘಟಕದ ಅಧ್ಯಕ್ಷ ವಿ. ರಾಮಚಂದ್ರನ್, ಕಾರ್ಯದರ್ಶಿ ಕೆ. ನರೇಂದ್ರ, ಎಂ. ಸಜೀವನ್, ಕೆ. ಕೃಷ್ಣ ಭಟ್, ಪಿ. ಪ. ಸುದೇವನ್ ಧರಣಿ ನೇತೃತ್ವ ವಹಿಸಿದ್ದರು.




