HEALTH TIPS

ರಾಷ್ಟ್ರಮಟ್ಟದಲ್ಲಿ ಮುಸ್ಲಿಂ ಸಮುದಾಯದ ಅಸ್ತಿತ್ವ ರಕ್ಷಣೆಗೆ ಯೋಜನೆ ಜಾರಿಗೊಳಿಸಲಾಗುವುದು-ಸಮಸ್ತ 100ನೇ ವರ್ಷಾಚರಣೆ ಘೋಷಣೆ ನೆರವೇರಿಸಿ ಕಾಂತಪುರಂ ಮುಸ್ಲಿಯಾರ್

 



                        ಕಾಸರಗೋಡು: ಜಾತ್ಯಾತೀತ ಪ್ರಜಾಸತ್ತಾತ್ಮಕ ರಾಷ್ಟ್ರದ ಉಳಿವು ಮತ್ತು ಪ್ರಗತಿಗೆ ನೆರವಾಗುವ ರೀತಿಯಲ್ಲಿ ಭಾರತದಲ್ಲಿ ಮುಸ್ಲಿಂ ಸಮುದಾಯದ ಅಸ್ತಿತ್ವವನ್ನು ರಕ್ಷಿಸಲು ಅಗತ್ಯ ಯೋಜನೆಗಳನ್ನು ರಚಿಸಲು ಸಮಸ್ತ ಕೇರಳ ಜಮೀಯ್ಯತುಲ್ ಉಲೇಮಾ ನೇತೃತ್ವ ನೀಡಲಿರುವುದಾಗಿ ಸಮಸ್ತ ಸಂಘಟನೆ ಪ್ರಧಾನ ಕಾರ್ಯದರ್ಶಿ ಕಾಂತಾಪುರ ಎ.ಪಿ.ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ. 

               ಅವರು ಕಾಸರಗೋಡು ಚಟ್ಟಂಚಾಲಿನ ಮಾಲಿಕ್‍ದೀನಾರ್ ನಗರದಲ್ಲಿ ಸಮಸ್ತ ಕೇರಳ ಜಮೀಯ್ಯತುಲ್ ಉಲೇಮಾದ 100ನೇ ವಾರ್ಷಿಕ ಘೋಷಣಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.  ಈ ಉದ್ದೇಶಕ್ಕಾಗಿ, ಸಮಸ್ತ ಮತ್ತು ಅಖಿಲ ಭಾರತ ಸುನ್ನಿ ಜಮೀಯತುಲ್ ಉಲೇಮಾ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಸುನ್ನಿ ಸಂಘಟನೆಗಳೊಂದಿಗೆ ಸಂಘಟಿತ ಚಟುವಟಿಕೆಗಳನ್ನು ಈಗಾಗಲೇ ಆರಂಭಿಸಿದೆ. ಸಮಸ್ತದ ಧೋರಣೆಗಳು ಮತ್ತು ನಿರ್ಧಾರಗಳು ಸಮಾಜದ ಮೇಲೆ ಮತ್ತು ವಿಶೇಷವಾಗಿ ಸಮುದಾಯದ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು ಇತಿಹಾಸದ ಒಂದು ಅಂಗವಾಗಿದೆ. ಇಸ್ಲಾಮಿನ ತತ್ವಗಳನ್ನು ತಿರುಚಿದ ಸಲಫಿ-ಜಮಾತ್ ಇಸ್ಲಾಮಿಕ್ ಚಳುವಳಿಗಳನ್ನು ಮೊದಲಿನಂತೆ ಬಲವಾಗಿ ಸಮರ್ಥಿಸಿಕೊಳ್ಳಲಾಗುವುದು.   ಮುಸ್ಲಿಂ ಸಮುದಾಯವನ್ನು ಆಂತರಿಕ ಒಡಕುಗಳಿಂದ ರಕ್ಷಿಸುವುದು ಮತ್ತು ಸಮಾಜದಲ್ಲಿನ ಉಗ್ರಗಾಮಿ ಮತ್ತು ಕೋಮುವಾದಿ ಪ್ರವೃತ್ತಿಗಳ ವಿರುದ್ಧ ಹೋರಾಡುವುದು ಸಮಸ್ತದ ಮೂಲ ಉದ್ದೇಶಗಳಾಗಿವೆ. ಕೇರಳದ ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಸಮಸ್ತ ಸಂಘಟನೆ ಈ ಎಲ್ಲಾ ಕಾರ್ಯಗಳನ್ನು ಮಾಡಿಕೊಡಲಿದೆ. ಮುಸ್ಲಿಂ ಸಮುದಾಯವು ಸಾಧಿಸಿದ ಈ ಪ್ರಗತಿಯು ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹೆಚ್ಚಿನ ಅಂಕ ಗಳಿಸುವ ರೀತಿಯಲ್ಲಿ ಕೇರಳವನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.


              ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಉಪಾಧ್ಯಕ್ಷ ಸೈಯದ್ ಅಲಿ ಬಾಫಕಿ ಅವರ ಪ್ರಾರ್ಥನೆಯೊಂದಿಗೆ ಘೋಷಣಾ ಸಭೆಗೆ ಚಾಲನೆ ನೀಡಿದರು.  ಸುನ್ನಿ ಯುವಜನ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ, ಉಪಾಧ್ಯಕ್ಷ ರಹ್ಮತುಲ್ಲಾ ಸಖಾಫಿ ಎಳಮರಮ್, ಕೇರಳ ಮುಸ್ಲಿಂ ಜಮಾತ್ ಕಾರ್ಯದರ್ಶಿ ಸುಲೈಮಾನ್ ಸಖಾಫಿ ಮಳಿಯೇಕಲ್ ವಿವಿಧ ನಿರ್ಣಯಗಳ ಕುರಿತು ಉಪನ್ಯಾಸ ನೀಡಿದರು. ಕೇಂದ್ರ ಮುಶಾವರ ಸದಸ್ಯ ಸೈಯದ್ ಫಝಲ್ ಕೋಯಮ್ಮ ತಙಳ್ ಕೂರ ಸಮಾರೋಪ ಭಾಷಣ ನಡೆಸಿದರು.  

            ಚಟ್ಟಂಚಾಲ್ ಮಲಿಕ್ ದಿನಾರ್ ನಗರದಲ್ಲಿ ಸಮಸ್ತ ಉಪಾಧ್ಯಕ್ಷ ಸೈಯದ್ ಅಲಿ ಬಾಫಕಿ ಅವರ ಪ್ರಾರ್ಥನೆಯೊಂದಿಗೆ ಘೋಷಣಾ ಸಭೆಗೆ ಚಾಲನೆ ನೀಡಿದರು. ಉಪಾಧ್ಯಕ್ಷ ಸೈಯದ್ ಕೆ.ಎಸ್.ಅಟ್ಟಕೋಯ ತಂಗಳ್ ಕುಂಬೋಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿಗಳಾದ ಸೈಯದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ, ಪೆÇನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಪೆರೋಡ್ ಅಬ್ದುರಹ್ಮಾನ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ಕೇಂದ್ರ ಮುಶಾವರ ಸದಸ್ಯ ವಂದೂರು ಅಬ್ದುರಹ್ಮಾನ್ ಫೈಝಿ ಸ್ವಾಗತಿಸಿದರು. ಸ್ವಾಗತಸಂಘದ ಪ್ರಧಾನ ಸಂಚಾಲಕ ಮುಹಮ್ಮದಲಿ ಸಖಾಫಿ ತೃಕರಿಪುರ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries