ಮಲಪ್ಪುರಂ: ವಡಕ್ಕೇರಾ ಮೂಲದ ಕುಂಜಿಪೆಣ್ ಎಂಬ 105 ರ ಹರೆಯದ ವಯೋವೃದ್ದೆ ಸಾಕ್ಷರತಾ ಮಿಷನ್ ಭಾನುವಾರ ನಡೆಸಿದ್ದ ಸಮಾನತೆ ಪರೀಕ್ಷೆ ಬರೆದಿದ್ದಾರೆ. ಕುಂಜಿಪ್ಪೆಣ್ ಅಜ್ಜಿ ಸಾಕ್ಷರತಾ ಮಿಷನ್ ನ 4ನೇ ತರಗತಿಯ ಸಮಾನತೆ ಪರೀಕ್ಷೆ ಬರೆದು ಬೆರಗುಗೊಳಿಸಿದ್ದಾರೆ.
ಬರೀ ಓದಿ ಪರೀಕ್ಷೆ ಬರೆಯುವುದಕ್ಕಿಂತ ಈ ವಯಸ್ಸಿನಲ್ಲಿ ಅಕ್ಷರ ಕಲಿಯಬೇಕು ಎಂಬುದು ಅಜ್ಜಿಯ ಕನಸು.
ಕುಂಜಿಪೆಣ್ ಅವರು 105 ನೇ ವಯಸ್ಸಿನಲ್ಲಿ ಸಾಕ್ಷರತಾ ಅಭಿಯಾನದ ಸಂದರ್ಭದಲ್ಲಿ ಪರೀಕ್ಷಾ ಹಾಲ್ ಅನ್ನು ತಲುಪಿದರು. ಪಂಗ್ ಸರ್ಕಾರಿ ಎಲ್ ಪಿ ಶಾಲೆಯಲ್ಲಿ 4ನೇ ತರಗತಿಯ ಸಮಾನತೆ ಪರೀಕ್ಷೆ ಬರೆದಿದ್ದಾರೆ. ಅಜ್ಜಿಗೆ ಏಳು ಮಕ್ಕಳು ಮತ್ತು 26 ಮೊಮ್ಮಕ್ಕಳಿದ್ದಾರೆ. ಅವರ ಸಂಪೂರ್ಣ ಬೆಂಬಲದಿಂದ ಅಜ್ಜಿ ಈ ದೌತ್ಯ ಮುನ್ನಡೆಸಿದರು.
ಕುಂಜಿಪ್ಪೆಣ್ ಗಿಂತಲೂ 22 ವರ್ಷ ಕಿರಿಯರಾದ 83 ವರ್ಷದ ಕಡಿಯಾಕುಟ್ಟಿ ಕೂಡ ಪರೀಕ್ಷೆಗೆ ಹಾಜರಾಗಿದ್ದರು.





