HEALTH TIPS

ವಿಐಪಿಗಳ ಮೇಲೆ ಉಗ್ರರ ಕಣ್ಣು: ಮುಂಬೈಯಲ್ಲಿ 1 ತಿಂಗಳು ಡ್ರೋನ್ ಹಾರಾಟ ನಿಷೇಧ

             ಮುಂಬೈಭಯೋತ್ಪಾದಕರು ಹಾಗೂ ಸಮಾಜಘಾತುಕ ಶಕ್ತಿಗಳು ವಿವಿಐಪಿಗಳನ್ನು ಗುರಿಯಾಗಿರಿಸಿ ಡ್ರೋನ್ ದಾಳಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳ ಕಾಲ ನಗರದಲ್ಲಿ ಎಲ್ಲ ರೀತಿಯ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ.

              ಈ ಕುರಿತು ಮುಂಬೈ ಪೊಲೀಸ್ ಆದೇಶ ಹೊರಡಿಸಿದ್ದು, 2023 ಡಿಸೆಂಬರ್ 20ರಿಂದ 2024 ಜನವರಿ 18ರವರೆಗೆ ಡ್ರೋನ್ ಹಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

                ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) 144ನೇ ಸೆಕ್ಷನ್‌ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ವಿವಿಐಪಿಗಳನ್ನು ಗುರಿಯಾಗಿಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾಯವನ್ನುಂಟು ಮಾಡಲು ಹಾಗೂ ಕಾನೂನು, ಸುವ್ಯವಸ್ಥೆ ಹದಗೆಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮದ ಭಾಗವಾಗಿ ನಗರದಲ್ಲಿ ಡ್ರೋನ್, ರಿಮೋಟ್ ನಿಯಂತ್ರಿತ ಮೈಕ್ರೋ ಲೈಟ್ ಏರ್‌ಕ್ರಾಫ್ಟ್, ಹ್ಯಾಂಡ್ ಗ್ಲೈಡರ್, ಹಾಟ್‌ ಏರ್ ಬಲೂನ್, ಪ್ಯಾರಾಗ್ಲೈಡರ್‌, ಪ್ಯಾರಾ ಮೋಟರ್‌ಗಳನ್ನು ನಿಷೇಧಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries