ಬದಿಯಡ್ಕ: ನೀರ್ಚಾಲು ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ 29ನೇ ವಾರ್ಷಿಕೋತ್ಸವ ಡಿ. 23 ಶನಿವಾರ ಜರಗಲಿರುವುದು. ಆ ಪ್ರಯುಕ್ತ ಬೆಳಗ್ಗೆ 5:ಕ್ಕೆ ದೀಪ ಪ್ರತಿಷ್ಠೆ, ಶರಣಂವಿಳಿ ಬಳಿಕ ವಿವಿಧ ಭಜನ ಸಂಘಗಳಿಂದ ಭಜನೆ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಮಂಗಳಾರತಿ ಬಳಿಕ ಅನ್ನದಾನ ನಡೆಯಲಿರುವುದು. ಮಧ್ಯಾಹ್ನ 02.ರಿಂದ ವಿಶ್ವನಾಥ ರೈ ಬಳಗದವರಿಂದ 'ಶರಸೇತು ಬಂಧನ' ಯಕ್ಷಗಾನ ತಾಳಮದ್ದಳೆ, ಸಂಜೆ 05.ರಿಂದ ತಾಯಂಬಕ, 06.30ಕ್ಕೆ ಮಾನ್ಯ ಶ್ರೀ ವೆಂಕಟರಮಣ ಕ್ಷೇತ್ರದಿಂದ ವಿವಿಧ ಆಕರ್ಷಣೆಗಳೊಂದಿಗೆ ಶ್ರೀಮಂದಿರಕ್ಕೆ ಉಲ್ಪೆ ಮೆರವಣಿಗೆ ಹೊರಡುವುದು. ಸಂಜೆ 6:30 ರಿಂದ 9:30 ತನಕ ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ 9:30ಕ್ಕೆ ಮಹಾಪೂಜೆ, ಮಂಗಳಾರತಿ ಬಳಿಕ ಅನ್ನದಾನ ನೆರವೇರಲಿರುವುದು. ರಾತ್ರಿ 10.ರಿಂದ "ನೃತ್ಯ ವೈವಿಧ್ಯ", 11:30 ರಿಂದ ಶ್ರೀ ಮುದ್ದುಕೃಷ್ಣ ಚುಕ್ಕಿನಡ್ಕ ಮತ್ತು ಬಳಗದವರಿಂದ "ಆಟದೊಳಗೊಂದು ಆಟ" ಹಾಸ್ಯಮಯ ಯಕ್ಷಗಾನ ನಡೆಯಲಿರುವುದು.

.jpg)
