ಕಾಸರಗೋಡು: ಬ್ರಹ್ಮಶ್ರೀ ನಾರಾಯಣ ಆಂದೋಲನದ ಆಧ್ಯಾತ್ಮಿಕ ಕೇಂದ್ರವಾದ ಶಿವಗಿರಿ ಮಠದ ಏಕೈಕ ಅಂಗಸಂಸ್ಥೆ ಗುರುಧರ್ಮ ಪ್ರಚಾರ ಸಭೆ ಮತ್ತು ಮಾತೃ-ಯುವಜನ ಸಭಾ ಸಮಿತಿ ರಚನಾ ಸಭೆ ನ. 3ರಂದು ಬೆಳಗ್ಗೆ 10.30ಕ್ಕೆ ನೀಲೇಶ್ವರ ವ್ಯಾಪಾರ ಭವನ ಸಭಾಂಗಣದಲ್ಲಿ ಜರುಗಲಿದೆ.
ಶಿವಗಿರಿ ಮಠದ ಧರ್ಮಸಂಘಂ ಟ್ರಸ್ಟ್ ನಿದೇಶ ಮೇರೆಗೆ ಆಯೋಜಿಸಿರುವ ಸಭೆಯಲ್ಲಿ ಶಿವಗಿರಿ ಮಠದ ಪ್ರಭಾರಿ ಬಂಗಳಂ ಗುರುಮಠ ಸ್ವಾಮಿ ಸುರೇಶ್ವರಾನಂದ ಅಧ್ಯಕ್ಷತೆ ವಹಿಸುವರು. ಮಾತೃಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಪಿ.ಕೆ. ಗೌರಿ ಟೀಚರ್, ಜಿಡಿ. ಪಿಎಸ್ ಜಂಟಿ ರಿಜಿಸ್ಟ್ರಾರ್ ಸಿ. ಟಿ ಅಜಯಕುಮಾರ್, ಯುವಜನ ಸಭಾ ಕೇಂದ್ರ ಸಮಿತಿ ಸದಸ್ಯರು, ಸೀನಾ ಸುರ್ಜಿತ್ ಮೊದಲಾದವರು ಭಾಗವಹಿಸಲಿದ್ದಾರೆ.




