HEALTH TIPS

ಆಳವಾದ ಗುಂಡಿಯಲ್ಲಿ ಸಿಲುಕಿದ್ದ 76 ವರ್ಷದ ವೃದ್ಧೆಯ ರಕ್ಷಣೆ

               ಕೊಚ್ಚಿ: ಆಳವಾದ ಗುಂಡಿಯಲ್ಲಿ ಸಿಲುಕಿಕೊಂಡಿದ್ದ ಕೇರಳದ 76 ವರ್ಷದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ. ಸುಮಾರು ಮೂರು ಗಂಟೆಗಳ ಕಾಲ ವೃದ್ಧೆ ತನ್ನ ಕುತ್ತಿಗೆ ಮಟ್ಟದವರೆಗೆ ಕೆಸರಿನಲ್ಲಿ ಮುಳುಗಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

              ಕಮಲಾಕ್ಷಿ ಅಮ್ಮ ಎಂಬ ಸ್ಥಳೀಯ ಮೀನುಗಾರ್ತಿ ಮಂಗಳವಾರ ಮಧ್ಯಾಹ್ನ ಮನೆಗೆ ವಾಪಸ್ಸಾಗುತ್ತಿದ್ದಾಗ ಮರಡು ಪುರಸಭೆ ವ್ಯಾಪ್ತಿಯ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದರು.

ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ‌ ಹರಿದಾಡಿದ್ದವಲ್ಲದೆ, ಇದನ್ನು ಸ್ಥಳೀಯ ಚಾನೆಲ್‌ಗಳು ನೇರಪ್ರಸಾರವನ್ನೂ ಮಾಡಿದ್ದವು.

               ವಯಸ್ಸಾದ ಮಹಿಳೆಯು ಗುಂಡಿಯಲ್ಲಿ ಸಿಲುಕಿಕೊಂಡಿದ್ದರು. ನಂತರ ಅವರನ್ನು ಹೊರತೆಗೆದು ದಡಕ್ಕೆ ತರಲಾಯಿತು. ಮರಡುವಿನಲ್ಲಿ ಸುಮಾರು ಐದು ಅಡಿ ಆಳದ ಕಸದ ರಾಶಿಯ ಗುಂಡಿ ರೂಪುಗೊಂಡಿದೆ ಎಂದು ವರದಿಯಾಗಿದೆ.

              'ನಾನು ಆಕಸ್ಮಿಕವಾಗಿ ಗುಂಡಿಗೆ ಬಿದ್ದೆ. ಬಳಿಕ ಅಲ್ಲಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. ಯಾರಾದರೂ ರಕ್ಷಣೆಗೆ ಬರುತ್ತಾರೆಂದು ಭಾವಿಸಿ, ಕಷ್ಟಪಟ್ಟು ಅಲ್ಲಿದ್ದ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದೆ' ಎಂದು ಕಮಲಾಕ್ಷಿ ಅಮ್ಮ ಘಟನೆಯನ್ನು ವಿವರಿಸಿದ್ದಾರೆ.

                ಸ್ಥಳೀಯ ನಿವಾಸಿ ಸೀನಾ ಟೆರೇಸ್‌ನಲ್ಲಿದ್ದಾಗ, ಸಮೀಪದ ಆಳವಾದ ಗುಂಡಿಯಲ್ಲಿ ಏನೋ ಚಲಿಸುತ್ತಿರುವಂತೆ ಕಂಡು ಬಂದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ ಅವರು, ಕಮಲಾಕ್ಷಿ ಅಮ್ಮನನ್ನು ಸುರಕ್ಷಿತವಾಗಿ ಮೇಲೆತ್ತಲು ನೆರವಾದರು. ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಅಗತ್ಯ ವೈದ್ಯಕೀಯ ನೆರವು ನೀಡಲಾಯಿತು ಎಂದು ಅಗ್ನಿಶಾಮಕ ಇಲಾಖೆಯ ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries