ನವದೆಹಲಿ: ಭಾರತೀಯ ಸೇನೆಯ ಸಶಸ್ತ್ರ ಪಡೆಗಳ ಒಟ್ಟಾರೆ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 97 ತೇಜಸ್ ಲಘು ಯುದ್ಧ ವಿಮಾನಗಳು ಮತ್ತು ಸುಮಾರು 150ಕ್ಕೂ ಅಧಿಕ ಪ್ರಚಂಡ ಹೆಲಿಕಾಪ್ಟರ್ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಗುರುವಾರ ಆರಂಭಿಕ ಅನುಮೋದನೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಭಾರತೀಯ ವಾಯುಪಡೆಯ ಎಸ್ಯು -30 ಫೈಟರ್ ಫ್ಲೀಟ್ ಅನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪವನ್ನು ಸಹ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಯುದ್ಧ ವಿಮಾನಗಳ ಖರೀದಿಯ ದೊಡ್ಡ ಯೋಜನೆ ಮತ್ತು ಎಸ್ಯು -30 ಫೈಟರ್ ಫ್ಲೀಟ್ ಅನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಗಳಿಗೆ ₹ 1 ಲಕ್ಷ ಕೋಟಿ ಖರ್ಚಾಗುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ.
ಡಿಎಸಿ ಅಂಗೀಕರಿಸಿರುವ ಯೋಜನೆಗಳ ಸಂಪೂರ್ಣ ವಿವರವನ್ನು ರಕ್ಷಣಾ ಸಚಿವಾಲಯವು ಶೀಘ್ರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.