HEALTH TIPS

ಪರ್ಫೆಕ್ಟ್ ನೀರು ದೋಸೆ ಮಾಡಬೇಕೆ? ಈ ಟಿಪ್ಸ್ ಟ್ರೈ ಮಾಡಿ

 ನೀರು ದೋಸೆ ಇಷ್ಟಪಡವರು ಕಮ್ಮಿ, ಆದರೆ ಇದನ್ನು ಮಾಡುವುದು ಅಷ್ಟು ಸುಲಭವಲ್ಲ. ಪೇಪರ್‌ನಂತೆ ತೆಳುವಾಗಿ, ಮೃದುವಾಗಿ ಇರುವ ನೀರು ದೋಸೆ ಮಾಡುವುದು ಒಂದು ಟ್ರಿಕ್ಸ್. ಅದನ್ನು ತಿಳಿದರೆ ಮಂಗಳೂರು , ಕರಾವಳಿ ಶೈಲಿಯ ಹೋಟೆಲ್‌ಗಳಲ್ಲಿ ಸಿಗುವಂತೆಯೇ ತೆಳುವಾದ ದೋಸೆ ತಯಾರಿಸಬಹುದು. ಈ ದೋಸೆಯ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ವೆಜ್‌ಗೂ ಸೂಪರ್, ಮೀನು-ಕೋರಿ ಕರಿಗೂ ಸೂಪರ್, ಬ್ರೇಕ್‌ಫಾಸ್ಟ್‌ಗೂ ಸೈ, ಡಿನ್ನರ್‌ಗೂ ಸೈ, ಬನ್ನಿ ನೀರು ದೋಸೆ ರೆಸಿಪಿ ಟ್ರಿಕ್ಸ್ ನೋಡೋಣ:

ಬೇಕಾಗುವ ಸಾಮಗ್ರಿ ಅಕ್ಕಿ ನೀರು ರುಚಿಗೆ ತಕ್ಕ ಉಪ್ಪು * 2 ಲೋಟ ಅಕ್ಕಿಯನ್ನು 6-7 ತಾಸು ನೆನೆ ಹಾಕಿ, ಬೆಳಗ್ಗೆ ಮಾಡುವುದಾದರೆ ರಾತ್ರಿ ನೆನೆ ಹಾಕಿ. * ನಂತರ ನುಣ್ಣನೆ ರುಬ್ಬಿ, ತುಂಬಾ ನುಣ್ಣನೆ ರುಬ್ಬಿದಷ್ಟೂ ದೋಸೆ ಚೆನ್ನಾಗಿ ಬರುತ್ತದೆ. * ನಂತರ ಅದಕ್ಕೆ ನೀರು ಸೇರಿಸಿ, ಮಂದ ಹಾಲು ಇರುತ್ತದೆಯಲ್ಲಾ ಆ ರೀತಿ ಇರಬೇಕು. * ಈಗ ಪ್ಯಾನ್ ಅಥವಾ ದೋಸೆ ಕಲ್ಲನ್ನು ಬಿಸಿ ಮಾಡಿ ಎಣ್ಣೆ ಸವರಿ, ಅದರ ಮೇಲೆ ಈ ತೆಳು ದೋಸೆ ಹಿಟ್ಟು ಹಾಕಿ. ದೋಸೆ ಹಿಟ್ಟು ಹರಡಿಕೊಳ್ಳುತ್ತದೆ. ತವಾವನ್ನು ಮತ್ತೊಂದು ಪಾತ್ರೆಯಿಂದ ಮುಚ್ಚಿ, ದೋಸೆ ಬೆಂದಾಗ ಸ್ವಲ್ಪ ಎದ್ದು ಬರುತ್ತದೆ, ಆವಾಗ ಮಗುಚಿ ಹಾಕಿದರೆ ದೋಸೆ ರೆಡಿ.

ಮುಖ್ಯವಾಗಿ ಗಮನಿಸಬೇಕಾದ ಅಂಶಗಳು * ದೋಸೆ ಹಿಟ್ಟು ತುಂಬಾ ಮಂದವಾಗಿದ್ದರೆ ದೋಸೆ ಚೆನ್ನಾಗಿ ಬರಲ್ಲ * ತುಂಬಾ ನೀರು ಹಾಕಿದರೂ ದೋಸೆ ಅಂಟು ಅಂಟಾಗುವುದು. 

ದೋಸೆ ಯಾವಾಗ ತವಾಗೆ ಅಂಟುತ್ತದೆ? * ತವಾ ಚೆನ್ನಾಗಿ ಬಿಸಿಯಾಗುವ ಮೊದಲು ದೋಸೆ ಹಿಟ್ಟು ಹಾಕಿದರೆ ದೋಸೆ ತವಾಗೆ ಅಂಟುತ್ತದೆ * ನೀರು ಹಾಕಿದ್ದು ಅಧಿಕವಾದರೆ ಅಕ್ಕಿ ಹಿಟ್ಟು ಸೇರಿಸಬಹುದು * ಉರಿ ತುಂಬಾ ಅಧಿಕವಿಟ್ಟರೆ ದೋಸೆಯ ಅಡಿ ಕಪ್ಪು-ಕಪ್ಪಾಗುವುದು.

 ತವಾಗೆ ಯಾವ ಎಣ್ಣೆ ಹಚ್ಚಬೇಕು? ತೆಂಗನೆಣ್ಣೆ ಹಚ್ಚಿದರೆ ತುಂಬಾ ರುಚಿಯಾಗಿರುತ್ತದೆ. ಬೇಕಿದ್ದರೆ ಸನ್‌ಫ್ಲವರ್‌ ಎಣ್ಣೆ ಹಚ್ಚಬಹುದು.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries