ಜಮ್ಮು: ಭಾರಿ ಪ್ರಮಾಣದ ಶಸ್ತಾಸ್ತ್ರ ಹೊತ್ತು ಪಾಕಿಸ್ತಾನ ಕಡೆಯಿಂದ ಭಾರತದ ಗಡಿ ಒಳಗೆ ನುಸುಳುತ್ತಿದ್ದ ನಾಲ್ವರು ಭಯೋತ್ಪಾದಕರ ಪ್ರಯತ್ನಕ್ಕೆ ಭಾರತೀಯ ಯೋಧರು ತಡೆಯೊಡ್ಡಿ ಒಬ್ಬಾತನನ್ನು ಹತ್ಯೆಗೈದಿದ್ದು, ಮೃತನ ಶವವನ್ನು ಉಳಿದ ಉಗ್ರರು ಎಳೆದುಕೊಂಡು ಹೋಗಿದ್ದಾರೆ.
0
samarasasudhi
ಡಿಸೆಂಬರ್ 23, 2023
ಜಮ್ಮು: ಭಾರಿ ಪ್ರಮಾಣದ ಶಸ್ತಾಸ್ತ್ರ ಹೊತ್ತು ಪಾಕಿಸ್ತಾನ ಕಡೆಯಿಂದ ಭಾರತದ ಗಡಿ ಒಳಗೆ ನುಸುಳುತ್ತಿದ್ದ ನಾಲ್ವರು ಭಯೋತ್ಪಾದಕರ ಪ್ರಯತ್ನಕ್ಕೆ ಭಾರತೀಯ ಯೋಧರು ತಡೆಯೊಡ್ಡಿ ಒಬ್ಬಾತನನ್ನು ಹತ್ಯೆಗೈದಿದ್ದು, ಮೃತನ ಶವವನ್ನು ಉಳಿದ ಉಗ್ರರು ಎಳೆದುಕೊಂಡು ಹೋಗಿದ್ದಾರೆ.
ಜಮ್ಮುವಿನ ಖೌರ್ ಸೆಕ್ಟರ್‌ನ ಅಖ್ನೂರ್ ಬಳಿ ಉಗ್ರರ ಒಳನುಸುಳುವಿಕೆಯ ಚಲನವಲನಗಳನ್ನು ಡಿಸೆಂಬರ್ 22ರ ರಾತ್ರಿ ಡ್ರೋನ್ ರೀತಿಯ ಆಧುನಿಕ ಯಂತ್ರದಿಂದ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಘಟಕ ಕಂಡುಕೊಂಡಿತ್ತು. ಕೂಡಲೇ ಎಚ್ಚೆತ್ತುಕೊಂಡು ಯೋಧರು ಕಾರ್ಯಾಚರಣೆ ಆರಂಭಿಸಿ ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ.
ಈ ವೇಳೆ ಪರಸ್ಪರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ. ಹತ ಉಗ್ರನ ಶವವನ್ನು ಪಾಕಿಸ್ತಾನ ಗಡಿಯಲ್ಲಿ ಅವನ ಸಹಚರರು ಎಳೆದುಕೊಂಡು ಹೋದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಖ್ನೂರ್ ಬಳಿಯ ಅಂತರರಾಷ್ಟ್ರೀಯ ಗಡಿಯಲ್ಲಿ ಸೇನೆ ಹೈಅಲರ್ಟ್ ಘೋಷಿಸಿದ್ದು ಮತ್ತಷ್ಟು ಉಗ್ರರು ಇರುವ ಅನುಮಾನದ ಹಿನ್ನೆಲೆಯಲ್ಲಿ ವ್ಯಾಪಕ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.