ಪತ್ತನಂತಿಟ್ಟ: ಮಂಡಲ ಪೂಜೆಗಾಗಿ ಅಯ್ಯಪ್ಪ ಸ್ವಾಮಿ ತೊಡುವ ತಂಗ ಅಂಗಿ(ವಿಶೇಷ ವಸ್ತ್ರಾಭರಣ) ಹೊತ್ತ ರಥ ಮೆರವಣಿಗೆ ನಿಲಕ್ಕಲ್ ಮೂಲಕ ಸಾಗಿಬಂದು ದೀಪಾರಾಧನೆಗೂ ಮುನ್ನ ಮೆರವಣಿಗೆ ಸನ್ನಿಧಿ ತಲುಪಿದ್ದು ನಾಳೆ ಮಂಡಲ ಪೂಜೆ ನಡೆಯಲಿದೆ.
ಡಿ.23ರಂದು ಅರನ್ಮುಳ ಪಾರ್ಥಸಾರಥಿ ದೇವಸ್ಥಾನದಿಂದ ಆರಂಭವಾದ ರಥಯಾತ್ರೆ ಇಂದು ಸಂಜೆ ಐದು ಗಂಟೆಗೆ ಸರಂಕುತ್ತಿ ತಲುಪಿತು. ಇಲ್ಲಿಂದ ಶಾಸ್ತ್ರೋಕ್ತವಾಗಿ ಬರಮಾಡಿಕೊಂಡು ಸನ್ನಿಧಾನಕ್ಕೆ ಕರೆದೊಯ್ಯಲಾಯಿತು. ತಂತ್ರಿಗಳು ಮತ್ತು ಮೇಲ್ಶಾಂತಿಯರು ಸೋಪಾನದಿಂದ ಕಳಶ ಸ್ವೀಕರಿಸಿ ದೇಗುಲಕ್ಕೆ ಕೊಂಡೊಯ್ದರು. ಬಳಿಕ ಅಯ್ಯಪ್ಪನಿಗೆ ವಸ್ತ್ರಾಭರಣ ಹೊದಿಸಿ ಪೂಜೆ ನೆರವೇರಿತು.
ನಾಳೆ (ಡಿ27) ಬೆಳಗ್ಗೆ 10.30ರಿಂದ 11ರ ನಡುವೆ ಮಂಡಲ ಪೂಜೆ ನಡೆಯಲಿದೆ. ಯೋಗ ಕೋಲು ಮತ್ತು ರುದ್ರಾಕ್ಷ ಮಾಲೆ ಧರಿಸಿದ ನಂತರ 11 ಗಂಟೆಗೆ ಅಯ್ಯಪ್ಪ ಸ್ವಾಮಿ ಯೋಗ ನಿದ್ರೆಗೊಳಗಾಗುವರು. ಇದರೊಂದಿಗೆ ಮಂಡಲ ಯಾತ್ರೆ ಮುಕ್ತಾಯವಾಗಲಿದೆ.




.webp)
