ಎರ್ನಾಕುಳಂ: ಗಾಂಧಿ ಪ್ರತಿಮೆಗೆ ಎಸ್‍ಎಫ್‍ಐ ಮುಖಂಡನೊಬ್ಬ ಅವಮಾನ ಮಾಡಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ. ಎಸ್‍ಎಫ್‍ಐ ಆಲುವಾ ಪ್ರದೇಶ ಸಮಿತಿ ಸದಸ್ಯ ಅಡೆಲ್ ನಾಸರ್ ಗಾಂಧಿ ಪ್ರತಿಮೆಗೆ ಅವಮಾನ ಮಾಡಿದವನೆಂದು ತಿಳಿದುಬಂದಿದೆ.
ಈತ ಭಾರತ್ ಮಾತಾ ಕಾನೂನು ಕಾಲೇಜು ಯೂನಿಯನ್ ಜವಾಬ್ದಾರಿ ಇರುವ ಮುಖಂಡ. ಕಾಲೇಜಿನಲ್ಲಿಯೇ ಗಾಂಧಿ ಪ್ರತಿಮೆಗೆ ಅವಮಾನ ಮಾಡಿದ್ದಾನೆ.
ಗಾಂಧಿ ಪ್ರತಿಮೆಗೆ ಕೂಲಿಂಗ್ ಗ್ಲಾಸ್ ಇರಿಸಿ ಚಿತ್ರ ತೆಗೆದಿರುವುದು ಕಂಡುಬಂದಿದೆ. ಗಾಂಧಿ ಸತ್ತಿಲ್ಲ ಎಂದು ಅಣಕಿಸಿ ಚಿತ್ರಗಳನ್ನು ತೆಗೆಯಲಾಗಿದೆ. ಘಟನೆಯ ವಿಡಿಯೋ ಬಿಡುಗಡೆಯಾಗಿದೆ.





