ಕೋಝಿಕ್ಕೋಡ್: ಇತರೆ ಧರ್ಮೀಯರ ಆಚರಣೆಯಲ್ಲಿ ಮುಸ್ಲಿಮರೂ ಪಾಲ್ಗೊಳ್ಳಬಹುದು ಎಂದು ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿರುವರು.
ಇಲ್ಲಿ ಇತರೆ ಸಮುದಾಯಗಳ ಸಂಸ್ಕೃತಿಯನ್ನು ನಕಲು ಮಾಡುವ ಅಗತ್ಯವಿಲ್ಲ. ಇದೇ ವೇಳೆ, ಸೌಹಾರ್ದತೆ ಯಾವಾಗಲೂ ಆಚರಣೆಗಳಲ್ಲಿ ನಡೆಯುತ್ತದೆ. ಅದನ್ನು ಇನ್ನೂ ಯಾರೂ ನಿಲ್ಲಿಸಿಲ್ಲ.ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೂ ಸಂಸ್ಕೃತಿಯನ್ನು ನಕಲು ಮಾಡುವುದಕ್ಕೂ ವ್ಯತ್ಯಾಸವಿದೆ ಎಂದಿರುವರು.
ಭಾರತದಲ್ಲಿ ಸೌಹಾರ್ದದ ಅಗತ್ಯತೆಯ ಬಗ್ಗೆ ಯಾವುದೇ ಸಂದೇಹವಿಲ್ಲ. ಇದು ಎಲ್ಲಾ ಸಮುದಾಯಗಳು ವಾಸಿಸುವ ದೇಶ. ಪ್ರಾಚೀನ ಕಾಲದಿಂದಲೂ ಅನ್ಯಧರ್ಮೀಯರ ಆಚರಣೆಯನ್ನು ಇಸ್ಲಾಮಿಕ್ ಎಂದು ಪರಿಗಣಿಸಲಾಗಿಲ್ಲ. ಅದನ್ನು ಇಸ್ಲಾಮಿಕ್ ಎಂದು ಒಪ್ಪಿಕೊಳ್ಳುವ ಯಾವುದೇ ಬಾಧ್ಯತೆ ಇಲ್ಲ. ಆದರೆ, ಇಸ್ಲಾಂ ಧರ್ಮಕ್ಕೆ ಅನ್ಯ ಸಂಸ್ಕøತಿ ತಾಕದ ರೀತಿಯಲ್ಲಿ ಹಿಂದಿನಂತೆಯೇ ಮುಂದುವರಿಸಲಾಗುವುದೆಂದು ಕಾಂತಪುರಂ ಹೇಳಿರುವರು.





