ಪತ್ತನಂತಿಟ್ಟ: ಶಬರಿಮಲೆಯಲ್ಲಿ ಮಂಡಲ ಪೂಜೆಯ ಅಂಗವಾಗಿ ಅಯ್ಯಪ್ಪ ಸ್ವಾಮಿಗೆ ಅಲಂಕರಿಸಲಿರುವ ವಸ್ತ್ರಾಭರಣ ಹೊತ್ತ ಮೆರವಣಿಗೆಯು ಅರನ್ಮುಲ ಪಾರ್ಥಸಾರಥಿ ದೇವಸ್ಥಾನದಿಂದ ಪ್ರಾರಂಭವಾಯಿತು.
ಬೆಳಗ್ಗೆ ಏಳು ಗಂಟೆಗೆ ಪಾರ್ಥಸಾರಥಿ ದೇವಸ್ಥಾನದಿಂದ ಮೆರವಣಿಗೆ ಆರಂಭವಾಯಿತು. 26ರಂದು ವಿವಿಧ ದೇವಸ್ಥಾನಗಳಿಂದ ಸ್ವಾಗತ ಪಡೆದು ಮೆರವಣಿಗೆ ಸನ್ನಿಧಾನ ತಲುಪಲಿದೆ. 26ರಂದು ಸಂಜೆ ದೀಪಾರಾಧನೆಗೂ ಮುನ್ನ ಮೆರವಣಿಗೆ ಸನ್ನಿಧಾನಂ ತಲುಪಲಿದೆ.
ವಸ್ತ್ರಾಭರಣ ಹೊತ್ತ ಮೆರವಣಿಗೆ ಮಧ್ಯಾಹ್ನ ಪಂಬಾ ತಲುಪಿತು. ನಂತರ ಪಂಬಾ ಗಣಪತಿ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನ ಮೂರು ಗಂಟೆಯ ನಂತರ ಗುರುಸ್ವಾಮಿಗಳು ವಸ್ತ್ರಾಭರಣಗಳನ್ನು ವಿಶೇಷ ಪೆಟ್ಟಿಗೆಗಳಲ್ಲಿ ನೀಲಿಮಲ, ಅಪಾಚೆಮೇಡು, ಶಬರಿಪೀಠದ ಮೂಲಕ ಸಂಜೆ ಐದು ಗಂಟೆಗೆ ಸರಂಕುತ್ತಿಗೆ ತರಲಿದ್ದಾರೆ. ಅಲ್ಲಿಂದ ದೇವಸ್ವಂ ಅಧಿಕಾರಿಗಳು ಹಾಗೂ ಪೋಲೀಸರು ಮೆರವಣಿಗೆಯನ್ನು ಬರಮಾಡಿಕೊಂಡು ಸನ್ನಿಧಾನಕ್ಕೆ ತೆರಳಲಿದ್ದಾರೆ.
ತಂತ್ರಿಗಳು ಮತ್ತು ಮೇಲ್ಶಾಂತಿಯರು ಸೋಪಾನದೊಂಗೆ ಕಳಶÀವನ್ನು ಸ್ವೀಕರಿಸಿ ದೇಗುಲಕ್ಕೆ ಕೊಂಡೊಯ್ಯುವರು. ಮೆರವಣಿಗೆಯನ್ನು ಮುಕ್ತಾಯಗೊಳಿಸಿದ ನಂತರ ಅಯ್ಯಪ್ಪ ಸ್ವಾಮಿಗೆ ವಸ್ತ್ರಭಾರಣ ಅಲಂಕರಿಸಿ ಪೂಜಿಸಲಾಗುವುದು. 27ರಂದು ಬೆಳಗ್ಗೆ 10.30ರಿಂದ 11ರ ನಡುವೆ ಮಂಡಲ ಪೂಜೆ ನಡೆಯಲಿದೆ. ಯೋಗ ಕೋಲು ಮತ್ತು ರುದ್ರಾಕ್ಷಮಾಲೆ ಧರಿಸಿದ ನಂತರ ಅಯ್ಯಪ್ಪನಿಗೆ ಯೋಗ ನಿದ್ರೆ ಮಾಡಿ 11 ಗಂಟೆಗೆ ಗರ್ಭಗೃಹ ಮುಚ್ಚಲಾಗುತ್ತದೆ. ಇದರೊಂದಿಗೆ ಮಂಡಲ ಯಾತ್ರೆ ಮುಕ್ತಾಯವಾಗಲಿದೆ.





