HEALTH TIPS

ಕೋವಿಡ್ ಬಳಿಕ ಕೂದಲು ಉದುರುವಿಕೆ ಹೆಚ್ಚಾಗಲು ಕಾರಣವೇನು? ತಜ್ಞರ ಸಲಹೆಯೇನು?

 ಕೋವಿಡ್‌ ಬಳಿಕ ತುಂಬಾ ಜನರು ತಮಗೆ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತಿರುವುದಾಗಿ ಹೇಳುತ್ತಿದ್ದಾರೆ, ಕಳೆದ ಎರಡು ವರ್ಷದಿಂದ ತುಂಬಾ ಜನರಲ್ಲಿ ಕೂದಲು ಉದುರುವ ಕಳೆದ 2 ವರ್ಷಗಳಿಂದ ತುಂಬಾ ಜನರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಅದರಲ್ಲೂ ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಾದರೆ ಕೂದಲು ಉದುರುವುದಕ್ಕೂ, ಕೋವಿಡ್‌ಗೂ ಸಂಬಂಧವಿದೆಯೇ? ಈ ಕುರಿತು ತಜ್ಞರು ಹೇಳುವುದೇನು ಎಂದು ನೋಡೋಣ ಬನ್ನಿ:

ಕೋವಿಡ್‌ಗೂ ಕೂದಲು ಉದುರುವಿಕೆಗೂ ಸಂಬಂಧವಿದೆ
ಕೂದಲು ತುಂಬಾ ಉದುರುತ್ತಿದ್ದರೆ ಅದಕ್ಕೂ ಕೋವಿಡ್‌ಗೂ ಸಂಬಂಧವಿದೆ ಎಂದು ಬೆಂಗಳೂರಿನಲ್ಲಿರುವ ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ & ಸ್ಕಿನ್ ರಿಸರ್ಚ್ & ಟ್ರೀಟ್ಮೆಂಟ್ ಸೆಂಟರ್ ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ.

ಜುಲೈ 2020 ರಿಂದ ಜೂನ್ 2022 ರ ನಡುವೆ ಕೂದಲು ಉದುರುವ ಸಮಸ್ಯೆ ಹೇಳಿ ಬಂದಿದ್ದ ಒಟ್ಟು 2525 ರೋಗಿಗಳನ್ನು ಅಧ್ಯಯನ ಮಾಡಿದಾಗ ಕೋವಿಡ್‌ ಬಾಧಿಸಿದವರಿಗೆ ಕೂದಲು ಉದುರುವ ಸಮಸ್ಯೆ ಕಂಡು ಬಂದಿದೆ. ಕೂದಲು ಉದುರುವ ಸಮಸ್ಯೆ ಎಂದು ಹೇಳಿ ಬಂದಿದ್ದವರಲ್ಲಿ ಶೇ.80ರಷ್ಟು ಜನರಿಗೆ ಕೋವಿಡ್‌ ಬಾಧಸಿದ ಬಳಿಕ ಈ ರೀತಿಯ ಸಮಸ್ಯೆ ಕಂಡು ಬಂದಿತ್ತು. ಶೇ. 85ರಷ್ಟು ಪುರುಷರಲ್ಲಿ ಬಕ್ಕತಲೆ ಸಮಸ್ಯೆ ಕಂಡು ಬರುತ್ತಿದೆ ಎಂದು ಹೇರ್ ಲೈನ್ ಇಂಟರ್ ನ್ಯಾಷನಲ್ ಹೇರ್ ಮತ್ತು ಸ್ಕಿನ್ ರಿಸರ್ಚ್ ಮತ್ತು ಟ್ರೀಟ್ಮೆಂಟ್ ಸೆಂಟರ್ನ ಟ್ರೈಕಾಲಜಿಸ್ಟ್ ಮತ್ತು ಚರ್ಮರೋಗ ತಜ್ಞ ಡಾ.ಕಲಾ ವಿಮಲ್ ಹೇಳಿದ್ದಾರೆ.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಕೂದಲು ಉದುರಲು ಕಾರಣವೇನು?
ಕೋವಿಡ್ ಕೂದಲು ಉದುರುವಿಕೆಯನ್ನು ಪ್ರಚೋದಿಸಲು ಕಾರಣವೆಂದರೆ ಕೂದಲು ಚಕ್ರದ ಅಡಚಣೆ. ಕೂದಲು ಚಕ್ರದಲ್ಲಿ ಮೂರು ಹಂತಗಳಿವೆ - ಅನಾಜೆನ್, ಕ್ಯಾಟಜೆನ್ ಮತ್ತು ಟೆಲೋಜೆನ್. ಅನಾಜೆನ್ ಬೆಳವಣಿಗೆಯ ಹಂತವಾಗಿದ್ದು, ಪ್ರತಿ 28 ದಿನಗಳಿಗೊಮ್ಮೆ ಕೂದಲು 1 ಸೆಂ .ಮೀಬೆಳೆಯುತ್ತದೆ. ಕ್ಯಾಟಜೆನ್ ಹಂತವು ಬೆಳವಣಿಗೆಯ ಹಂತದ ಅನಾಜೆನ್ ಸಿಗ್ನಲಿಂಗ್ ಅಂತ್ಯದ ಅಂತ್ಯವಾಗಿದೆ. ಇದು ಸುಮಾರು 2 ರಿಂದ 3 ವಾರಗಳವರೆಗೆ ಇರುತ್ತದೆ. ಟೆಲೋಜೆನ್ ಸುಮಾರು 100 ದಿನಗಳವರೆಗೆ ಇರುವ ವಿಶ್ರಾಂತಿ ಹಂತವಾಗಿದೆ. COVID ಸಂಭವಿಸಿದಾಗ, ಕೂದಲಿನ ಹೆಚ್ಚಿನ ಎಳೆಗಳು ಅಕಾಲಿಕವಾಗಿ ಟೆಲೋಜೆನ್ ಅಥವಾ ವಿಶ್ರಾಂತಿ ಹಂತವನ್ನು ಪ್ರವೇಶಿಸುತ್ತವೆ. ಇದು ಕೋವಿಡ್ ನಂತರದ 2 ರಿಂದ 3 ತಿಂಗಳುಗಳಲ್ಲಿ ಕಂಡುಬರುತ್ತದೆ. ಇದು ನಿಲ್ಲುವ ಮೊದಲು 6 ರಿಂದ 9 ತಿಂಗಳವರೆಗೆ ಇರುತ್ತದೆ, .

ಮಾನಸಿಕ ಒತ್ತಡ ಕೂಡ ಕೂದಲು ಉದುರಲು ಕಾರಣ

ಅತಿಯಾದ ಮಾನಸಿಕ ಒತ್ತಡ ಕೂಡ ಕೂದಲು ಉದುರಲು ಕಾರಣವಾಗುವುದು.

ಕೂದಲು ಉದುರುವುದನ್ನು ತಡೆಗಟ್ಟಲು ಯಾವ ಬಗೆಯ ಚಿಕಿತ್ಸೆ ಪರಿಣಾಮಕಾರಿ?
ನಿಮಗೆ ಟ್ರೈಕಾಲಜಿಸ್ಟ್‌ಗಳು ಟಾಪಿಕಲ್ ಸೀರಮ್ ಗಳು, ಮೌಖಿಕ ಆಂಟಿಆಕ್ಸಿಡೆಂಟ್‌ಗಳು (ಮಾತ್ರೆಗಳು), ಕಡಿಮೆ ಮಟ್ಟದ ಲೇಸರ್ ಥೆರಪಿ, ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ ಚಿಕಿತ್ಸೆಗಳು ಇವುಗಳಲ್ಲಿ ನಿಮಗೆ ಯಾವುದು ಸೂಕ್ತವೋ ಅದನ್ನು ಸೂಚಿಸುತ್ತಾರೆ. ಇವುಗಳು ಕೂದಲು ಉದುರುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries