HEALTH TIPS

ಸಂಸತ್ ಭವನದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ

               ವದೆಹಲಿ: ಸಂಸತ್ ಭವನದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಆರಂಭಿಸಿದ್ದಾರೆ. ಸಂಸದರಿಗೆ, ಸಂಸತ್ ಭವನದ ಸಿಬ್ಬಂದಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಕಲ್ಪಿಸುವ ಆಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

              ಸಂದರ್ಶಕರಿಗೆ ಸಂಸತ್ ಭವನ ಪ್ರವೇಶಿಸಲು ಅವಕಾಶ ನೀಡುವುದು ಆರಂಭವಾದ ನಂತರ, ಅವರು ನಾಲ್ಕನೆಯ ಗೇಟಿನಿಂದ ಒಳಗೆ ಬರುತ್ತಾರೆ ಎಂದು ಮೂಲಗಳು ಹೇಳಿವೆ. ಬುಧವಾರದ ಭದ್ರತಾ ಲೋಪದ ನಂತರ ಸಂದರ್ಶಕರಿಗೆ ಪ್ರವೇಶ ನಿಷೇಧಿಸಲಾಗಿದೆ.

                ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತವರು, ಸದನಕ್ಕೆ ನುಗ್ಗುವುದನ್ನು ತಡೆಯಲು, ಗ್ಯಾಲರಿಗೆ ಗಾಜಿನ ತಡೆಗೋಡೆ ಅಳವಡಿಸುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಗಳಲ್ಲಿ ಇರುವಂತ ದೇಹ ತಪಾಸಣಾ ಯಂತ್ರಗಳನ್ನು ಸಂಸತ್ ಭವನದಲ್ಲಿಯೂ ಅಳವಡಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

              ಸಂಸತ್ ಭವನದಲ್ಲಿ ಇರುವ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚು ಮಾಡಲಾಗಿದೆ. ಸಂಸತ್ತಿಗೆ ಭೇಟಿ ನೀಡುವ ಸಂದರ್ಶಕರು ನಾಲ್ಕು ಹಂತಗಳ ತಪಾಸಣೆಗೆ ಒಳ‍‍‍ಪಡಬೇಕು. ಹಳೆಯ ಸಂಸತ್ ಭವನದಲ್ಲಿ ಭದ್ರತಾ ಸಿಬ್ಬಂದಿಯು ಸಂದರ್ಶಕರನ್ನು, ಅವರ ಭೇಟಿಯ ಅವಧಿ ಪೂರ್ಣಗೊಂಡಾಗ ಹೊರಗೆ ಕಳುಹಿಸುತ್ತಿದ್ದರು. ಆದರೆ, ಹೊಸ ಕಟ್ಟಡದಲ್ಲಿ ಅವರ ನಿಯೋಜನೆಯು ಕಡಿಮೆ ಇದೆ.

                 ಭದ್ರತಾ ಸಿಬ್ಬಂದಿಯ ಮಂಜೂರಾದ ಹುದ್ದೆಗಳ ಸಂಖ್ಯೆ 301. ಆದರೆ 176 ಹುದ್ದೆಗಳು ಮಾತ್ರ ಭರ್ತಿಯಾಗಿವೆ, 125 ಹುದ್ದೆಗಳು ಖಾಲಿ ಇವೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

                  ತಳಹಂತದ ಅಧಿಕಾರಿಗಳ ಹುದ್ದೆಗಳಲ್ಲಿ ಅತಿಹೆಚ್ಚಿನ ಹುದ್ದೆಗಳು ಖಾಲಿ ಇವೆ. 72 ಎರಡನೆಯ ಶ್ರೇಣಿಯ ಭದ್ರತಾ ಸಹಾಯಕರ ನೇಮಕಕ್ಕೆ ಮಂಜೂರಾತಿ ಇದೆ. ಆದರೆ ಭರ್ತಿಯಾಗಿರುವ ಹುದ್ದೆಗಳ ಸಂಖ್ಯೆ ಒಂಬತ್ತು ಮಾತ್ರ. 69 ಮೊದಲ ಶ್ರೇಣಿಯ ಭದ್ರತಾ ಸಹಾಯಕರ ನೇಮಕಕ್ಕೆ ಮಂಜೂರಾತಿ ಇದ್ದರೂ, 24 ಹುದ್ದೆಗಳು ಮಾತ್ರ ಭರ್ತಿಯಾಗಿವೆ ಎಂದು ಪಿಟಿಐ ವರದಿ ಹೇಳಿದೆ. ಮೂಲಗಳ ಪ್ರಕಾರ, ಹತ್ತು ವರ್ಷಗಳಿಂದ ಹೊಸ ನೇಮಕಾತಿಗಳು ನಡೆದಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries