ಇಸ್ತಾಂಬುಲ್: ಟರ್ಕಿ ಸಂಸತ್‌ನಲ್ಲಿ ಇಸ್ರೇಲ್ ದಾಳಿ ಖಂಡಿಸಿ ಭಾಷಣ ಮಾಡುತ್ತಿದ್ದ ಸಂಸದ ಹಸನ್ ಬಿಟ್ಮೆಜ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಟರ್ಕಿ: ಇಸ್ರೇಲ್ ದಾಳಿ ಖಂಡಿಸಿ ಸದನದಲ್ಲಿ ಮಾತನಾಡುತ್ತಿರುವಾಗಲೇ ಸಂಸದ ಸಾವು
0
ಡಿಸೆಂಬರ್ 16, 2023
Tags
0
samarasasudhi
ಡಿಸೆಂಬರ್ 16, 2023
ಇಸ್ತಾಂಬುಲ್: ಟರ್ಕಿ ಸಂಸತ್‌ನಲ್ಲಿ ಇಸ್ರೇಲ್ ದಾಳಿ ಖಂಡಿಸಿ ಭಾಷಣ ಮಾಡುತ್ತಿದ್ದ ಸಂಸದ ಹಸನ್ ಬಿಟ್ಮೆಜ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹಸನ್ ಬಿಟ್ಮೆಜ್ ಅವರು ಸದನದಲ್ಲಿ ಇಸ್ರೇಲ್ ಮತ್ತು ಗಾಜಾ ಬಗ್ಗೆ ಮಾತನಾಡುತ್ತಿದ್ದರು. ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅವರು, ದೇವರು (ಅಲ್ಲಾ) ಇಸ್ರೇಲ್ ಅನ್ನು ಕ್ಷಮಿಸುವುದಿಲ್ಲ ಎಂದು ಹೇಳಿ ಕುಸಿದು ಬಿದ್ದರು.
ಹಸನ್ ಬಿಟ್ಮೆಜ್ ಅವರು ಭಾಷಣ ಮಾಡಿ ಕುಸಿದು ಬಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಕೈರೋದ ಅಲ್ ಅಜರ್ ವಿಶ್ವವಿದ್ಯಾನಿಲಯದ ಪದವೀಧರರಾದ ಬಿಟ್ಮೆಜ್ ಅವರು ಇಸ್ಲಾಮಿಕ್ ಯೂನಿಯನ್ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದರು. ಕೆಲವು ವರ್ಷಗಳ ಹಿಂದೆ ಇಸ್ಲಾಮಿಕ್ ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ಅವರು ಫೆಲಿಸಿಟಿಯ ಸಂಸದರಾಗಿದ್ದಾರೆ.
ಬಿಟ್ಮೆಜ್ ಅವರು ಪತ್ನಿ, ಮಗುವನ್ನು ಅಗಲಿದ್ದಾರೆ.