ತಿರುವನಂತಪುರ: ಸರ್ಕಾರದ ಆದಾಯ ಹೆಚ್ಚಿಸಲು ಎಲ್ಲಿಲ್ಲದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶವಾದ ಮಾಹಿಯಿಂದ ಕೇರಳಕ್ಕೆ ಮದ್ಯವನ್ನು ತರುವುದನ್ನು ಕಾನೂನುಬದ್ಧಗೊಳಿಸುವುದು ಅಬಕಾರಿಯ ಈಗಿನ ಪ್ರಸ್ತಾಪವಾಗಿದೆ.
ಈ ರೀತಿ ವಿತರಿಸುವ ಮದ್ಯದ ಮೇಲೆ ಸುಂಕ ವಿಧಿಸುವ ಮೂಲಕ ಸರ್ಕಾರದ ಆದಾಯವನ್ನು ಹೆಚ್ಚಿಸಬಹುದು ಎಂದು ಶಿಫಾರಸು ಮಾಡಲಾಗಿದೆ.
ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆರ್.ಆನಂದವಲ್ಲಿ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿಯಲ್ಲಿ ಈ ಪ್ರಸ್ತಾವನೆ ಇದೆ. ಪ್ರಸ್ತುತ, ಮಾಹಿಯಿಂದ ಕೇರಳಕ್ಕೆ ಮದ್ಯವನ್ನು ಕಳ್ಳಸಾಗಣೆ ಮಾಡುವುದು ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾದ ಅಪರಾಧವಾಗಿದೆ.
ಹಸುಗಳ ಕೃತಕ ಗರ್ಭಧಾರಣೆಗಾಗಿ ಹೈನುಗಾರರಿಗೆ ನೀಡುತ್ತಿದ್ದ ಉಚಿತ ಭತ್ಯೆಯನ್ನೂ ಸರ್ಕಾರ ರದ್ದುಗೊಳಿಸಿದೆ. ಪಶು ಸಂಗೋಪನಾ ಇಲಾಖೆ ರೈತರಿಂದ ಪ್ರತಿ ಜಾನುವಾರುಗಳಿಗೆ 25 ರೂ. ವಸೂಲು ಮಡಲು ಸೂಚಿಸಲಾಗಿದೆ. ಹಸು, ಎಮ್ಮೆ, ಮೇಕೆ ಸೇರಿದಂತೆ ಜಾನುವಾರುಗಳ ಕೃತಕ ಗರ್ಭಧಾರಣೆಗೆ 25 ರೂ.ನೀಡಬೇಕಾಗಲಿದೆ. ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಉಚಿತ ವ್ಯವಸ್ಥೆಗಳನ್ನು ನಿಲ್ಲಿಸಬೇಕಾದ ಸ್ಥಿತಿಯಲ್ಲಿ ಸರ್ಕಾರ ಈಗ ಚಿಂತಿಸುತ್ತಿದೆ.





