HEALTH TIPS

ಅಕ್ಷರಗಳನ್ನು ಕೂಡಿಸಿ ಓದಲು ಗೊತ್ತಿಲ್ಲದ ಮಕ್ಕಳಿಗೂ 'ಎ ಪ್ಲಸ್': ಸ್ವ-ವಿಮರ್ಶೆಗೈದು ಶಿಕ್ಷಣ ಗುಣಮಟ್ಟ ಬಿಚ್ಚಿಟ್ಟ ಸಾರ್ವಜನಿಕ ಶಿಕ್ಷಣ ನಿರ್ದೇಶಕ ಎಸ್. ಶಾನವಾಸ್

             ತಿರುವನಂತಪುರಂ: ಕೇರಳದಲ್ಲಿ ಸಾರ್ವಜನಿಕ ಶಿಕ್ಷಣವು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಹೈಟೆಕ್ ತರಗತಿ ಕೊಠಡಿಗಳು ಮತ್ತು ಉತ್ತಮ ಕಲಿಕಾ ವಿಧಾನಗಳು 10 ನೇ ತರಗತಿ ಮತ್ತು ಪ್ಲಸ್ ಟುಗಳಲ್ಲಿ ಹೆಚ್ಚಿನ ಶೇಕಡಾವಾರು ಉತ್ತೀರ್ಣತೆಯ ಹಿಂದಿನ ಕಾರಣಗಳಾಗಿವೆ. 

            ಆದರೆ ಈ ಬಗ್ಗೆ ಸಾರ್ವಜನಿಕ ಶಿಕ್ಷಣ ನಿರ್ದೇಶಕ ಎಸ್. ಶಾನವಾಜ್ ಟೀಕಿಸಿರುವÀರು. ಅಕ್ಷರ ಓದಲು ಬಾರದ ಮಕ್ಕಳೂ ಎ+ ಪಡೆದು ಉತ್ತೀರ್ಣಗೊಳ್ಳುತ್ತಿದ್ದು, ಇದು ಮಕ್ಕಳಿಗೆ ಮಾಡುವ ಮೋಸವಾಗಿದೆ ಎಂದರು. ಪಬ್ಲಿಕ್ ಪರೀಕ್ಷೆಗಳಲ್ಲಿ ಮಕ್ಕಳ ಯಶಸ್ಸಿಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಶಿಕ್ಷಕರಿಗೆ ಶೇ.50ಕ್ಕಿಂತ ಹೆಚ್ಚು ಅಂಕ ನೀಡಬೇಡಿ ಎಂದು ಸಲಹೆಯನ್ನೂ ನೀಡಿದ್ದಾರೆ. .

             'ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದೀರಿ? ಪರೀಕ್ಷೆಗಳು ಪರೀಕ್ಷೆಗಳಾಗಿರಬೇಕು. ಮಕ್ಕಳು ಉತ್ತೀರ್ಣರಾಗಲಿ, ಅಭ್ಯಂತರವಿಲ್ಲ. ಎಲ್ಲರೂ ಎ ಪ್ಲಸ್ ಮತ್ತು ಎ ಗ್ರೇಡ್ ಪಡೆಯುವುದು  ಅಸಾಮಾನ್ಯವಾಗಿದೆ. 69,000 ಮಕ್ಕಳು ಪ್ರತಿ ಬಾರಿ ಎ + ಪಡೆಯುವುದೆಂದರೆ ಏನು? ಇದು ಓದಲು ಗೊತ್ತಿಲ್ಲದ ಮಕ್ಕಳನ್ನು ಸಹ ಒಳಗೊಳ್ಳಿಸಿ ಎಂದು ನನಗೆ ಖಚಿತವಾಗಿದೆ. ವಂಚನೆ ಎಂದರೆ ಮಗುವಿಗೆ ಇಲ್ಲದ ಪ್ರತಿಭೆ ಇದೆ ಎಂದು ಹೇಳುವುದು' ಎಂದು ಎಸ್. ಶಾನವಾಜ್ ಹೇಳಿರುವರು. ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ತಯಾರಿ ಕಾರ್ಯಾಗಾರದ ವೇಳೆ ಅವರು ಈ ಟೀಕೆ ವ್ಯಕ್ತಪಡಿಸಿದ್ದಾರೆ.

              10 ಮತ್ತು ಪ್ಲಸ್ ಟು ತರಗತಿಯಲ್ಲಿ ಶೇಕಡವಾರು ಹೆಚ್ಚು ಉತ್ತೀರ್ಣರಾದ ಬಗ್ಗೆ ಹೆಮ್ಮೆ ಪಡುವ ಕೇರಳದ ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಮಾತುಗಳಿವು. ಪ್ರತಿ ಉತ್ತರ ಪತ್ರಿಕೆಗೊಂದು ಅಂಕಗಳನ್ನು ನೀಡದಂತೆ ಮೌಖಿಕ ಸೂಚನೆಯೊಂದಿಗೆ ಕಾರ್ಯಾಗಾರ ಕೊನೆಗೊಂಡಿತು. ಕಳೆದ ಸಾಲಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 99.7ರಷ್ಟು ಉತ್ತೀರ್ಣರಾಗಿದ್ದಾರೆ. 68,604 ವಿದ್ಯಾರ್ಥಿಗಳು ಪೂರ್ಣ ಎ ಪ್ಲಸ್ ಪಡೆದಿದ್ದಾರೆ.

       ಆದರೆ ಮೌಲ್ಯಮಾಪನ ಸುಧಾರಿಸಲು ಟೀಕೆ ಮಾಡಲಾಗಿದೆ ಎಂದು ಎಸ್. ಶಾನವಾಜ್ ವಿವರಣೆ ನೀಡಿದ್ದಾರೆ. ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಅವಹೇಳನ ಮಾಡುವ ಹೇಳಿಕೆ ಬೇಡವಾಗಿತ್ತೆಂದು ಶಿಕ್ಷಕರ ವಲಯದಲ್ಲಿ ಮಾತು ಕೇಳಿಬಂದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries