ತಿರುವನಂತಪುರ: ಕೇರಳದ ಸ್ಥಳೀಯ ಸಂಸ್ಥೆಗಳ 33 ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) 17 ಸ್ಥಾನಗಳಲ್ಲಿ ಗೆದ್ದು, ಮೇಲುಗೈ ಸಾಧಿಸಿದೆ.
0
samarasasudhi
ಡಿಸೆಂಬರ್ 14, 2023
ತಿರುವನಂತಪುರ: ಕೇರಳದ ಸ್ಥಳೀಯ ಸಂಸ್ಥೆಗಳ 33 ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) 17 ಸ್ಥಾನಗಳಲ್ಲಿ ಗೆದ್ದು, ಮೇಲುಗೈ ಸಾಧಿಸಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಒಂದು ವಾರ್ಡ್‌ನಲ್ಲಿ ಗೆದ್ದು ತನ್ನ ಖಾತೆ ತೆರೆದಿದ್ದು, ಮತ್ತೊಂದು ವಾರ್ಡ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಆಡಳಿತದಲ್ಲಿರುವ ಎಲ್‌ಡಿಎಫ್ 10 ಮತ್ತು ಎನ್‌ಡಿಎ ನಾಲ್ಕು ವಾರ್ಡ್‌ಗಳಲ್ಲಿ ಗೆದ್ದಿವೆ. ಎಎಪಿ ಮತ್ತು ಎಸ್‌ಡಿಪಿಐ ತಲಾ ಒಂದೊಂದು ವಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.
ಇದಕ್ಕೂ ಮುನ್ನ ಕಾಂಗ್ರೆಸ್ 11, ಎಲ್‌ಡಿಎಫ್ 12 , ಎನ್‌ಡಿಎ ಆರು ವಾರ್ಡ್‌ಗಳಲ್ಲಿ ಗೆದ್ದಿದ್ದವು.
'ಫಲಿತಾಂಶವು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಬಗ್ಗೆ ಜನರಿಗಿರುವ ಅಸಮಾಧಾನವನ್ನು ತೋರಿಸುತ್ತಿದೆ' ಎಂದು ಕೇರಳ ಪ್ರದೇಶ ಕಾಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದಾರೆ.
ಎಎಪಿ ಹರ್ಷ
ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದ ಕರೀಂಕುನ್ನಂ ಗ್ರಾಮ ಪಂಚಾಯಿತಿಯ ನೆಡಿಯಾಕಾಡ್ ವಾರ್ಡ್‌ನಲ್ಲಿ ಎಎಪಿ ಅಭ್ಯರ್ಥಿ ಬೀನಾ ಕುರಿಯನ್ ಗೆಲುವು ಸಾಧಿಸಿದ್ದಾರೆ. ಕೋಟಯಂ ಜಿಲ್ಲೆಯ ಅರೀಕ್ಕರದಲ್ಲಿ ಎಎಪಿ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದಾರೆ.