HEALTH TIPS

ಚೀನಾದ ನಿಗೂಢ ನ್ಯುಮೋನಿಯಾ ಭಾರತಕ್ಕೆ ಕಾಲಿಟ್ದೆಟಿತೇ?: ಶೀತ, ಗಂಟಲು, ಎದೆ, ತಲೆನೋವು ಕಡೆಗಣಿಸುವಂತಿಲ್ಲ.ಎಚ್ಚರ!

               ವದೆಹಲಿ: ಭಾರತದಲ್ಲಿ ಏಪ್ರಿಲ್ ನಿಂದ ಸೆಪ್ಟೆಂಬರ್ 2023 ರ ನಡುವೆ ವಾಕಿಂಗ್ ನ್ಯುಮೋನಿಯಾದ ಏಳು ಪ್ರಕರಣಗಳನ್ನು ಪತ್ತೆ ಮಾಡಿದೆ. ಆದಾಗ್ಯೂ, ಚೀನಾ ಮತ್ತು ಯುಎಸ್‌ನ ನಿಗೂಢ ನ್ಯುಮೋನಿಯಾಕ್ಕೆ ಅವು ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಏಮ್ಸ್​ ಸ್ಪಸ್ಟಪಡಿಸಿದೆ.

             ಮೈಕೋಪ್ಲಾಸ್ಮಾ ನ್ಯುಮೋನಿಯಾ ಅಥವಾ ವಾಕಿಂಗ್ ನ್ಯುಮೋನಿಯಾ ಚೀನಾ ಮತ್ತು ಅಮೆರಿಕಾದಲ್ಲಿ ಉಲ್ಬಣಗೊಂಡಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಆಸ್ಪತ್ರೆಯಿಂದ ಏಳು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದ್ದವು. ಆದಾಗ್ಯೂ ಈ ಪ್ರಕರಣಗಳು ಚೀನಾ ಮತ್ತು ಯುಎಸ್‌ನಲ್ಲಿನ ನಿಗೂಢ ನ್ಯುಮೋನಿಯಾ ಅಲೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

               ದೆಹಲಿಯ ಎಐಐಎಂಎಸ್‌ನ ಮೈಕ್ರೋಬಯಾಲಜಿ ವಿಭಾಗದಲ್ಲಿ ಪರೀಕ್ಷಿಸಲಾದ 611 ಮಾದರಿಗಳಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. 'ಚೀನಾ ಸೇರಿದಂತೆ ವಿಶ್ವದ ಕೆಲವು ಭಾಗಗಳಿಂದ ಇತ್ತೀಚೆಗೆ ವದಿಯಾದ ಪ್ರಕರಣಗಳಲ್ಲಿ ಮಕ್ಕಳಲ್ಲಿ ಉಸಿರಾಟದ ಸೋಂಕುಗಳ ಉಲ್ಬಣಕ್ಕೆ ಭಾರತದಲ್ಲಿ ಪತ್ತೆಯಾಗಿರುವ ಈ ಏಳು ಪ್ರಕರಣಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

               ಚೀನಾದಲ್ಲಿ ಅಕ್ಟೋಬರ್‌ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳಕ್ಕೆ ಅಡೆನೊವೈರಸ್‌ಗಳು, ಇನ್‌ಫ್ಲುಯೆನ್ಸ ವೈರಸ್ ಮತ್ತು ಆರ್‌ಎಸ್‌ವಿಯಂತಹ ತಿಳಿದಿರುವ ರೋಗಕಾರಕಗಳು ಕಾರಣವೆಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇವು ಸೌಮ್ಯವಾದ, ಶೀತ-ತರಹದ ರೋಗಲಕ್ಷಣಗಳನ್ನು ಮಾತ್ರ ಉಂಟುಮಾಡುತ್ತದೆ. ಆದಾಗ್ಯೂ, ಮೇ ತಿಂಗಳಿನಿಂದ ವಿಶೇಷವಾಗಿ ಬೀಜಿಂಗ್‌ ಮತ್ತು ಉತ್ತರದ ನಗರಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

               ವಾಕಿಂಗ್ ನ್ಯುಮೋನಿಯಾ ಸೌಮ್ಯ ರೀತಿಯ ನ್ಯುಮೋನಿಯಾ ಆಗಿದ್ದು, ರೋಗಿಗಳು ತಮ್ಮ ನಿಯಮಿತ ಚಟುವಟಿಕೆಗಳನ್ನು ಮುಂದುವರಿಸಲು ಆಗಾಗ್ಗೆ ಅನುವು ಮಾಡಿಕೊಡುತ್ತದೆ. ಆದರೆ ಮೈಕೋಪ್ಲಾಸ್ಮಾ ನ್ಯುಮೋನಿಯಾ, ಕ್ಲಮೈಡೋಫಿಲಾ ನ್ಯುಮೋನಿಯಾ ಅಥವಾ ಲೀಜಿಯೋನೆಲ್ಲಾ ನ್ಯುಮೋಫಿಲಾ ಎಂಬ ವಿಲಕ್ಷಣ ಬ್ಯಾಕ್ಟೀರಿಯಾಗಳಿಂದ ಬರುತ್ತದೆ. ಇದು ಚೀನಾ ಮತ್ತು ಭಾರತದಂತಹ ಪ್ರಪಂಚದ ವಿವಿಧೆಡೆ ಜನರ ಮೇಲೆ ಪರಿಣಾಮ ಬೀರಬಹುದು. ಮಕ್ಕಳು, ವಯಸ್ಕರು ಮತ್ತು ಹಿರಿಯರೆಂಬ ಭೇದವಿಲ್ಲದೆ ವಾಕಿಂಗ್ ಅಥವಾ ಮೈಕ್ರೋಪ್ಲಾಸ್ಮಾ ನಿಮೋನಿಯಾ ವಿವಿಧ ರೀತಿಯ ಉಸಿರಾಟದ ಕಾಯಿಲೆಗಳನ್ನು ಹೊಂದಿರಬಹುದು ಎನ್ನುತ್ತಾರೆ ನುರಿತ ವೈದ್ಯರು.
                        ವಾಕಿಂಗ್, ಮೈಕೋಪ್ಲಾಸ್ಮಾ ನ್ಯುಮೋನಿಯಾ ನಡುವಿನ ವ್ಯತ್ಯಾಸ:
                 ಮೈಕೋಪ್ಲಾಸ್ಮಾ ಮತ್ತು ವಾಕಿಂಗ್ ನ್ಯುಮೋನಿಯಾ ಎರಡೂ ರೀತಿಯ ಶ್ವಾಸಕೋಶದ ಸೋಂಕುಗಳು. ಆದರೆ ಅವು ಕೆಲವು ಪ್ರಮುಖ ವ್ಯತ್ಯಾಸಗಳನ್ನು ಹೊಂದಿವೆ ಎಂದು ಡಾ.ತಯಾಲ್ ಹೇಳುತ್ತಾರೆ. ನ್ಯುಮೋನಿಯಾ ಎಂಬುದು ಶ್ವಾಸಕೋಶದಲ್ಲಿನ ಸಣ್ಣ ಗಾಳಿಯ ಚೀಲಗಳಾದ ಅಲ್ವಿಯೋಲಿಯ ಉರಿಯೂತಕ್ಕೆ ಕಾರಣವಾಗುತ್ತದೆ. ಈ ಉರಿಯೂತವು ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries