ಕಾಸರಗೋಡು: ಬೇಕಲ ಕೋಟೆ ಸÀಮೀಪದ ಕೋಟಕುನ್ನು ಶ್ರೀ ರಾಮಶ್ರೀ ಅಮ್ಮನವರು ಮತ್ತು ನವದುರ್ಗಾಂಬಿಕಾ ದೇವಸ್ಥಾನದ ನವೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜನೀಯ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಸಾದ ರೂಪದಲ್ಲಿ ನೀಡಿದ 1 ಲಕ್ಷ ರೂ. ಡಿ.ಡಿ. ಕೊಡುಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ವಿಚಕ್ಷಣಾಧಿಕಾರಿ ಕೆ.ಮೋನಪ್ಪ ಅವರು ದೇವಸ್ಥಾನದ ಕೋಶಾಧಿಕಾರಿ ಮೋಹನ್ ಬೇಕಲ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕಿ ಜಯಂತಿ ಅವರು ಉಪಸ್ಥಿತರಿದ್ದರು.





