HEALTH TIPS

ಈ ವರ್ಷ ಜನಸಂಖ್ಯೆ ಎಷ್ಟು ಏರಿಕೆ ಕಂಡಿದೆ ಗೊತ್ತಾ? ಭಾರತದ ಕೊಡುಗೆ ಎಷ್ಟು?

 ಭೂಮಿಯ ಮೇಲೆ ಅದೆಷ್ಟೋ ಜೀವರಾಶಿಗಳಿವೆ ಆದ್ರೆ ವಿಶ್ವಕ್ಕೆ ಕಾಡುತ್ತಿರುವ ಆತಂಕ ಜನಸಂಖ್ಯಾ ಏರಿಕೆ. ದಶಕಗಳಿಂದಲೂ ಜನಸಂಖ್ಯೆ ಏರುಗತಿಯಲ್ಲೇ ಇದೆ. ಏಷ್ಯಾದ ರಾಷ್ಟ್ರಗಳಲ್ಲಂತು ಜನಸಂಖ್ಯೆ ಮಿತಿ ಮೀರುತ್ತಿದೆ. ಚೀನಾ, ಭಾರತ, ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳಿ ಜನಸಂಖ್ಯೆ ಏರಿಕೆ ಬಹುದೊಡ್ಡ ಸಮಸ್ಯೆಯೇ..

ಜನಸಂಖ್ಯೆ ಏರಿಕೆಯು ಯಾವೆಲ್ಲಾ ರೀತಿಯಲ್ಲಿ ಸಮಸ್ಯೆ ತಂದೊಡ್ಡುತ್ತಿವೆ ಎಂಬುದಂತು ನಮಗೆ ತಿಳಿದಿದೆ. ಎಲ್ಲಾ ಸಮಸ್ಯೆಗಳಿಗೆ ಮೂಲ ಹುಡುಕುತ್ತಾ ಹೊರಟರೆ ಜನಸಂಖ್ಯೆ ಏರಿಕೆ ಎದುರಿಗೆ ಕಾಣುತ್ತದೆ. ಈ ನಡುವೆ ವಿಶ್ವಕ್ಕೆ ಮತ್ತೆ ಎದುರಾಗಿರುವ ಮತ್ತೊಂದು ಆತಂಕ ಎಂದರೆ ಮುಂಬರುವ 2024ರಲ್ಲಿ ಜನಸಂಖ್ಯಾ ಸ್ಫೋಟ ಮತ್ತಷ್ಟು ಹೆಚ್ಚಾಗಲಿದೆಯಂತೆ.

ವಿಶ್ವ ಜನಸಂಖ್ಯೆಯು ಕಳೆದ ವರ್ಷದಲ್ಲಿ 75 ಮಿಲಿಯನ್ ಹೆಚ್ಚಾಗಿದೆ ಮತ್ತು ಹೊಸ ವರ್ಷದ ದಿನದಂದು ಇದು 8 ಶತಕೋಟಿಗೂ ಹೆಚ್ಚಾಗಲಿದೆ ಎಂದು US ಸೆನ್ಸಸ್ ಬ್ಯೂರೋ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಕಳೆದ ವರ್ಷದಲ್ಲಿ ವಿಶ್ವಾದ್ಯಂತ ಬೆಳವಣಿಗೆ ದರವು ಕೇವಲ 1 ಶೇಕಡಾಕ್ಕಿಂತ ಕಡಿಮೆ ಇತ್ತು. 2024 ರ ಆರಂಭದಲ್ಲಿ, ಸೆನ್ಸಸ್ ಬ್ಯೂರೋ ಅಂಕಿಅಂಶಗಳ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ಸೆಕೆಂಡಿಗೆ 4.3 ಹುಟ್ಟು ಮತ್ತು ಎರಡು ಸಾವುಗಳನ್ನು ನಿರೀಕ್ಷಿಸಲಾಗಿದೆ.

ಪ್ರಸ್ತುತ ವೇಗವು ದಶಕದ ಅಂತ್ಯದವರೆಗೆ ಮುಂದುವರಿದರೆ, 2020ರ ದಶಕವು ಯುಎಸ್ ಇತಿಹಾಸದಲ್ಲಿ ನಿಧಾನವಾಗಿ ಬೆಳೆಯುತ್ತಿರುವ ದಶಕವಾಗಬಹುದು, 2020 ರಿಂದ 2030 ರವರೆಗಿನ 10 ವರ್ಷಗಳ ಅವಧಿಯಲ್ಲಿ ಶೇಕಡಾ 4 ಕ್ಕಿಂತ ಕಡಿಮೆ ಬೆಳವಣಿಗೆ ದರವನ್ನು ನೀಡಲಿದೆ ಎಂದು ಜನಸಂಖ್ಯಾ ಶಾಸ್ತ್ರಜ್ಞ ವಿಲಿಯಂ ಫ್ರೇ ಹೇಳಿದ್ದಾರೆ.


2024ರ ಆರಂಭದಲ್ಲಿ,ಅಮೆರಿಕ ಪ್ರತಿ 9 ಸೆಕೆಂಡುಗಳಿಗೆ ಒಂದು ಹುಟ್ಟು ಮತ್ತು ಪ್ರತಿ 9.5 ಸೆಕೆಂಡಿಗೆ ಒಂದು ಸಾವನ್ನು ಅನುಭವಿಸುವ ನಿರೀಕ್ಷೆಯಿದೆ. ಆದಾಗ್ಯೂ, ವಲಸೆಯು ಜನಸಂಖ್ಯೆಯ ಪ್ರಮಾಣ ಇಳಿಕೆಯಾಗದಂತೆ ಮಾಡಲಿದೆ ಎಂದು ವರದಿಯಾಗಿದೆ.

ನಿವ್ವಳ ಅಂತಾರಾಷ್ಟ್ರೀಯ ವಲಸೆಯು ಪ್ರತಿ 28.3 ಸೆಕೆಂಡಿಗೆ ಒಬ್ಬ ವ್ಯಕ್ತಿಯನ್ನು ಅಮೆರಿಕ ಜನಸಂಖ್ಯೆಯೊಂದಿಗೆ ಸೇರಿಸುತ್ತದೆ. ಜನನಗಳು, ಸಾವುಗಳು ಮತ್ತು ನಿವ್ವಳ ಅಂತರರಾಷ್ಟ್ರೀಯ ವಲಸೆಯ ಈ ಸಂಯೋಜನೆಯು ಅಮೆರಿಕ ಜನಸಂಖ್ಯೆಯನ್ನು ಪ್ರತಿ 24.2 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಸೇರ್ಪಡೆಯೊಂದಿಗೆ ಹೆಚ್ಚಳವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಭಾರತದ ಜನಸಂಖ್ಯೆ ಎಷ್ಟು ವೇಗವಾಗಿ ಹೆಚ್ಚುತ್ತಿದೆ?

2023ರಲ್ಲಿ ಭಾರತದ ಪ್ರಸ್ತುತ ಜನಸಂಖ್ಯೆಯು 1,428,627,663 ಆಗಿದೆ, ಇದು 2022 ರಿಂದ 0.81% ಹೆಚ್ಚಳವಾಗಿದೆ. 2022 ರಲ್ಲಿ ಭಾರತದ ಜನಸಂಖ್ಯೆಯು 1,417,173,173 ಆಗಿತ್ತು, 2021 ರಿಂದ 0.68% ಹೆಚ್ಚಳವಾಗಿದೆ. ಆದರೆ ಈ ಪ್ರಮಾಣ 2024ರಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. 2020ರಿಂದ ಕೋವಿಡ್ ಕಾರಣದಿಂದಾಗಿ ಜನನ ಪ್ರಮಾಣ ಕಡಿಮೆಯಾಗಿ ಮರಣ ಪ್ರಮಾಣದಲ್ಲಿ ತುಸು ಏರಿಕೆ ಕಂಡಿತ್ತು ಎಂದು ವಿಶ್ಲೇಷಿಸಲಾಗಿದೆ.

2020ರಲ್ಲಿ ಭಾರತದ ಜನಸಂಖ್ಯೆಯು 1,396,387,127 ಆಗಿತ್ತು. ಇದು 3 ವರ್ಷದಲ್ಲಿ 1,428,627,663ಕ್ಕೆ ಏರಿಕೆ ಕಂಡಿತು. ಆದರೆ 2019ರ ಈಚೆಗೆ ಈ ಏರಿಕೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ತುಸು ನೆಮ್ಮದಿ ತಂದಿದೆ. 2019ರಲ್ಲಿ ಏರಿಕೆ ಪ್ರಮಾಣ ಶೇ. 1.3ರಷ್ಟಿತ್ತು. ಆದರೆ ಈ ಪ್ರಮಾಣ 2023ರ ವೇಳೆಗೆ 0.81ಕ್ಕೆ ಇಳಿದಿದೆ. ಆದರೆ 2022ಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ. 2022ರಲ್ಲಿ 0.66ರಷ್ಟಿದ್ದ ಪ್ರಮಾಣ 2023ರಲ್ಲಿ 0.81ಕ್ಕೆ ಏರಿದೆ.

ಭಾರತದ ಜನಸಂಖ್ಯಾ ಏರಿಕೆ ಪ್ರಮಾಣವೂ 1962 ಹಾಗೂ 1963ರಲ್ಲಿ ಅತೀ ಹೆಚ್ಚು ಮಟ್ಟಕ್ಕೆ ತಲುಪಿತ್ತು, ಈ ವರ್ಷಗಳಲ್ಲಿ ಜನಸಂಖ್ಯಾ ಏರಿಕೆ ಪ್ರಮಾಣವು ಶೇ.2.34ರಷ್ಟಿತ್ತು. ಈ ಪ್ರಮಾಣವೀಗ 0.81ಕ್ಕೆ ಇಳಿಕೆ ಕಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries