HEALTH TIPS

ಸಿಂಗಪುರ: ಪ್ರತಿಷ್ಠಿತ ಕಲಾ ಪುರಸ್ಕಾರಕ್ಕೆ ಮೀರಾ ಚಂದ್‌ ಭಾಜನ

               ಸಿಂಗಪುರ: ಭಾರತ ಮೂಲದ, ಲೇಖಕಿ ಮೀರಾ ಚಂದ್‌(81) ಅವರು ಸಿಂಗಪುರದ ಪ್ರತಿಷ್ಠಿತ ಕಲಾ ಪುರಸ್ಕಾರವಾದ ಕಲ್ಚರಲ್‌ ಮೆಡಾಲಿಯನ್‌ಗೆ ಭಾಜನರಾಗಿದ್ದಾರೆ.

                ದೇಶದ ಕಲೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ನೀಡಿದ ಕೊಡುಗೆಗಾಗಿ ಮೀರಾ ಅವರಿಗೆ ಈ ಪುರಸ್ಕಾರ ಲಭಿಸಿದೆ.

                ಕಾದಂಬರಿಗಾರ್ತಿ ಸುಚೆನ್‌ ಕ್ರಿಸ್ಟೀನ್‌ ಲಿಮ್‌ ಹಾಗೂ ಮಲಯ ನೃತ್ಯ ಪ್ರವೀಣ ಒಸ್ಮಾನ್‌ ಅಬ್ದುಲ್‌ ಹಮೀದ್‌ ಅವರು ಸಹ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪ್ರಶಸ್ತಿಯು 80 ಸಾವಿರ ಸಿಂಗಪುರ ಡಾಲರ್ ಮೊತ್ತ (₹ 49,71,178) ಒಳಗೊಂಡಿದೆ.

               ಸಿಂಗಪುರ ಅಧ್ಯಕ್ಷ ತರ್ಮನ್‌ ಷಣ್ಮುಗಂ ಅವರು ತಮ್ಮ ಅಧಿಕೃತ ನಿವಾಸ ಇಸ್ತಾನದಲ್ಲಿ ಮೂವರಿಗೆ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

                  1997ರಲ್ಲಿ ಹೋ ಮಿನ್‌ಫಾಂಗ್ ನಂತರ ಮೀರಾ ಹಾಗೂ ಸುಚೆನ್‌ ಅವರು ಈ ಪ್ರಶಸ್ತಿ ಪಡೆದ ಮೊದಲ ಇಂಗ್ಲಿಷ್ ಭಾಷೆಯ ಮಹಿಳಾ ಬರಹಗಾರರಾಗಿದ್ದಾರೆ. ಬಹುಸಂಸ್ಕೃತಿಗಳ ಸಮಾಜವನ್ನು ಚಿತ್ರಿಸುವುದಕ್ಕೆ ಮೀರಾ ಅವರು ಹೆಸರುವಾಸಿಯಾಗಿದ್ದಾರೆ. ಅವರ 'ದಿ ಪೇಂಟೆಡ್ ಕೇಜ್‌' (1986) ಕೃತಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗಾಗಿ ದೀರ್ಘಪಟ್ಟಿಯಲ್ಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries